ಬೆಂಗಳೂರು:
ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಮೇಲೆ ತೆರಿಗೆ ವಿಧಿಸುವ ಯಾವುದೇ ಪ್ರಸ್ತಾಪ ಪಾಲಿಕೆಯ ಮುಂದಿಲ್ಲ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಸ್ಪಷ್ಟಪಡಿಸಿದ್ದು,ಮಹಾ ನಗರಿ ಜನರ ಮೇಲೆ ಕಸದ ಕರ ಭಾರವನ್ನು ಹಾಕುವುದನ್ನು ಅವರು ತಳ್ಳಿಹಾಕಿದರು.
ವಿಧಾನಸೌಧದಲ್ಲಿ ಮಿಷನ್ 2022 ಯೋಜನೆಯ ಅಂಗವಾಗಿ ಮುಖ್ಯಮಂತ್ರಿಗಳ ಜೊತೆ ನಡೆದ ಮಾಧ್ಯಮ ಸಂ ವಾದದಲ್ಲಿ ಮಾತನಾಡಿದ ಅವರು,ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸದ ಸೆಸ್ ಜಾಸ್ತಿ ಮಾಡುವ ಪ್ರಸ್ತಾಪ ಇಲ್ಲ,ಕಸಕ್ಕೆ ಸಂಬಂಧಿಸಿದಂತೆ ಹೊಸದಾಗಿ ಯಾವುದೇ ದರ ವಿಧಿಸಲ್ಲ ಎಂದು ತಿಳಿಸಿದರು.ವೈಟ್ ಟ್ಯಾಪಿಂಗ್ ರಸ್ತೆ ವೇಗವಾಗಿ ಮುಗಿಸಲು ಆದ್ಯತೆ ನೀಡಲಾಗುತ್ತದೆ.ಹೊಸದಾಗಿ ವೈಟ್ ಟ್ಯಾಪಿಂಗ್ ಮಂಜೂರಾತಿ ಮಾಡುವ ಬಗ್ಗೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪ ಇಲ್ಲ.ಭವಿಷ್ಯದಲ್ಲಿ ಅದರ ಪರಿಶೀಲನೆ ಮಾಡ ಲಾಗುತ್ತದೆ.ಸದ್ಯ ಹಾಲಿ ಇರುವ ಕೆಲಸ ಮುಗಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.