Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • BBMP Khata: ಸರ್ಕಾರವೇ ಅವರ ಮನೆ ಬಾಗಿಲಿಗೆ ಆಸ್ತಿ ದಾಖಲೆಗಳನ್ನು ತಲುಪಿಸಲಿದೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
  • ಬೆಂಗಳೂರು ನಗರ

BBMP Khata: ಸರ್ಕಾರವೇ ಅವರ ಮನೆ ಬಾಗಿಲಿಗೆ ಆಸ್ತಿ ದಾಖಲೆಗಳನ್ನು ತಲುಪಿಸಲಿದೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

Vighnesh Pawar July 15, 2023 8:00 PM
BBMP Khata: Govt will deliver property documents at their doorstep: Deputy Chief Minister DK Shivakumar

BBMP Khata: Govt will deliver property documents at their doorstep: Deputy Chief Minister DK Shivakumar

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಬೆಂಗಳೂರಿನ ನಾಗರಿಕರು ಇನ್ನು ಮುಂದೆ ತಮ್ಮ ಆಸ್ತಿ ದಾಖಲೆಗಳಿಗೆ ಸರ್ಕಾರಿ ಕಚೇರಿಗಳನ್ನು ಅಲೆಯುವ ಅಗತ್ಯ ಇರುವುದಿಲ್ಲ. ಸರ್ಕಾರವೇ ಅವರ ಮನೆ ಬಾಗಿಲಿಗೆ ಅವರ ಆಸ್ತಿ ದಾಖಲೆಗಳನ್ನು ತಲುಪಿಸುವ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.

ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ಶನಿವಾರ ವಿಧಾನಸೌಧದಲ್ಲಿ ಬೆಂಗಳೂರು ನಗರದ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ವಿಷಯ ಪ್ರಕಟಿಸಿದರು.

ಖಾತೆ ಎಂದು ಕರೆಯುವ ಬದಲು ಅದಕ್ಕೆ ಬೇರೆ ಹೆಸರು ಇಟ್ಟು, ಎಲ್ಲ ಆಸ್ತಿ ದಾಖಲೆಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಪಾಣಿಗಳನ್ನು ನೀಡುವ “ಭೂಮಿ” ವ್ಯವಸ್ಥೆ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ ಮನೆ ಬಾಗಿಲಲ್ಲೇ ಆಸ್ತಿ ದಾಖಲೆಗಳನ್ನು ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.

ಇನ್ನು ಆಸ್ತಿ ತೆರಿಗೆ ವಿಚಾರವಾಗಿ ಇಂದಿನ ಸಭೆಯಲ್ಲಿ ಚರ್ಚೆಯಾಗಿದ್ದು, ಕಾನೂನು ರೀತಿಯಲ್ಲಿ ತೆರಿಗೆ ಕಟ್ಟುತ್ತಿರುವವರಿಗೆ ತೊಂದರೆಯಾಗುತ್ತಿದ್ದು, ತೆರಿಗೆ ಕಟ್ಟದವರಿಗೆ ರಕ್ಷಣೆ ಸಿಗುತ್ತಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಲಾಯಿತು.

ನಾವು ಮನೆ ಬಾಗಿಲಲ್ಲೇ ಆಯಾ ಆಸ್ತಿ ದಾಖಲೆಗಳನ್ನು ತಲುಪಿಸಿದರೆ, ಯಾರ ಬಳಿ ಎಷ್ಟು ಆಸ್ತಿ ಇದೆ ಎಂಬ ಸ್ಪಷ್ಟ ಚಿತ್ರಣ ಸಿಗುತ್ತದೆ. ಆಗ ಯಾರೂ ಕೂಡ ಆಸ್ತಿ ತೆರಿಗೆ ಪಾವತಿಸದೇ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದರು.

ಆಸ್ತಿ ತೆರಿಗೆ ವಿಚಾರದಲ್ಲಿ ದೊಡ್ಡವರು, ಸಣ್ಣವರು ಎಂಬ ಬೇಧ ಮಾಡುವುದಿಲ್ಲ. ಈ ವಿಚಾರದಲ್ಲಿ ಯಾರು ತೆರಿಗೆ ಪಾವತಿಸಿಲ್ಲ ಎಂದು ಮ್ಯಾಪಿಂಗ್ ಮಾಡುತ್ತೇವೆ. ನಾವು ನಮ್ಮ ಸಂಪನ್ಮೂಲ ವೃದ್ಧಿಸಿಕೊಳ್ಳದಿದ್ದರೆ ಬೆಂಗಳೂರು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದರು.

ನಾವು ಕೈಗೆತ್ತಿಕೊಳ್ಳಲು ಮುಂದಾಗಿರುವ ಬೃಹತ್ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ ಮಾಡಿಕೊಳ್ಳಬೇಕು. ಹೀಗಾಗಿ ಎಲ್ಲರೂ ತೆರಿಗೆ ಪಾವತಿಸುವಂತೆ ನೋಡಿಕೊಳ್ಳಬೇಕು ಎಂದರು.

ಇನ್ನು ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಮಕ್ಕಳ ಅಭಿಪ್ರಾಯವನ್ನು ಪಡೆಯಲು ಸಲಹೆ ಬಂದಿದ್ದು, ಮಕ್ಕಳ ಸಲಹೆಯನ್ನು ಸರ್ಕಾರ ಪರಿಗಣಿಸಲಿದೆ. ಈ ವಿಚಾರವಾಗಿ ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳ ಜೊತೆ ಸಭೆ ಆಯೋಜಿಸುವಂತೆ ಒಂದು ಸಂಸ್ಥೆಗೆ ಸೂಚನೆ ನೀಡಿದ್ದೇನೆ. ಎಲ್ಲರ ಅಭಿಪ್ರಾಯ ಪಡೆಯಲು ಸಾಧ್ಯವಾಗದೇ ಇರುವುದರಿಂದ ಡಿಬೇಟ್ ಕಾರ್ಯಕ್ರಮದ ಮೂಲಕ ಬೆಂಗಳೂರಿನ ವಿಚಾರವಾಗಿ ಮಕ್ಕಳು ಯಾವ ರೀತಿ ಕನಸು ಕಾಣುತ್ತಿದ್ದಾರೆ ಎಂದು ಅವರ ಅಭಿಪ್ರಾಯ ತಿಳಿಯಲಾಗುವುದು ಎಂದು ಅವರು ಹೇಳಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಈಗಾಗಲೇ ಕಾನೂನು ಇದ್ದು, ಫುಟ್ಪಾತ್ ಮೇಲೆ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು, ಪಾದಾಚಾರಿಗಳಿಗೂ ಅನುಕೂಲ ಆಗುವಂತೆ ನೀತಿ ರೂಪಿಸಲಾಗುವುದು.

ಇನ್ನು ತ್ಯಾಜ್ಯ ವಿಲೇವಾರಿ ವಿಚಾರ ಕೂಡ ಹಿಂದಿನ ಸಭೆಯಲ್ಲಿ ಚರ್ಚೆಯಾಗಿದ್ದು ಎಲ್ಲಿಂದರಲ್ಲಿ ರಸ್ತೆಗಳ ಪಕ್ಕದಲ್ಲಿ ತ್ಯಾಜ್ಯಗಳನ್ನು ಸುರಿಯುತ್ತಿದ್ದಾರೆ. ಈ ವಿಚಾರವಾಗಿ ಪಾಲಿಕೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದೇನೆ ಎಂದರು.

ಬೆಂಗಳೂರಿನ ಸ್ವಚ್ಛತೆ ಕಾಪಾಡುವ ವಿಚಾರವಾಗಿ ಈ ತಿಂಗಳಲ್ಲಿ ಎರಡು ಮೂರು ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು. ಈಗ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ.

ಇನ್ನು ಬೆಂಗಳೂರಿನಲ್ಲಿ ಜಾಹೀರಾತು ವಿಚಾರವಾಗಿ ನೂತನ ನೀತಿಯನ್ನು ರಚಿಸಲಾಗುವುದು. ಆ ಮೂಲಕ ಹೆಚ್ಚಿನ ಆದಾಯ ಬರುವಂತೆ ಮಾಡಲಾಗುವುದು.

ಬೆಂಗಳೂರಿನ ಅಭಿವೃದ್ಧಿ ವಿಚಾರವಾಗಿ ಸುಮಾರು 6 ರಿಂದ 7 ವಿಭಾಗಗಳಲ್ಲಿ ಸಾರ್ವಜನಿಕರಿಂದ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ.

ಈ ಸಲಹೆಗಳ ಪರಿಶೀಲನೆ ಹಾಗೂ ವರ್ಗೀಕರಣಕ್ಕೆ ಕೆಲವು ಸಂಘ ಸಂಸ್ಥೆಗಳ ಜೊತೆ ಚರ್ಚೆ ಮಾಡಲಾಗಿದೆ.

ಇಂದಿನ ಸಭೆಯಲ್ಲಿ ಸರ್ಕಾರ ನಾಗರಿಕರ ಸಮಸ್ಯೆಗಳನ್ನು ಆಗಾಗ ಆಲಿಸುತ್ತಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಳ್ಳಿಗಳಲ್ಲಿ ಗ್ರಾಮ ಸಭೆಗಳ ಮಾದರಿಯಲ್ಲಿ ವಾರ್ಡ್ ಮಟ್ಟದಲ್ಲಿ ವಾರ್ಡ್ ಸಭೆಗಳನ್ನು ಮಾಡಬೇಕು. ಆ ಮೂಲಕ ಸ್ಥಳೀಯ ನಾಗರೀಕರ ಅಭಿಪ್ರಾಯ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.

ರಸ್ತೆ ಗುಂಡಿ ವಿಚಾರವಾಗಿ ಬೆಂಗಳೂರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ಮಾಡಲಾಗುವುದು.

ಈ ವಿಚಾರವಾಗಿ ಗೃಹಮಂತ್ರಿಗಳ ಜೊತೆ ಮಾತನಾಡಿದ್ದು, ಕಲಾಪ ಮುಗಿದ ಬಳಿಕ ಸಭೆ ಮಾಡುತ್ತೇನೆ ಎಂದರು.

ಬಿಡಿಎ ಅಧ್ಯಕ್ಷ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನಗರಾಭಿವೃದ್ಧಿ ಇಲಾಖೆ) ರಾಕೇಶ್ ಸಿಂಗ್, ಬಿಬಿಎಂಪಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನಗರಾಭಿವೃದ್ಧಿ ಇಲಾಖೆ) ತುಷಾರ್ ಗಿರಿ ನಾಥ್, ಐಎಎಸ್ ಅಧಿಕಾರಿ ರಾಜೇಂದ್ರ ಚೋಳನ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.

About the Author

Vighnesh Pawar

Subscriber

View All Posts

Post navigation

Previous: ಗೃಹ ಲಕ್ಷ್ಮಿ ಯೋಜನೆಗೆ ಅಗತ್ಯ ಸಿದ್ಧತೆ – ಲಕ್ಷ್ಮಿ ಹೆಬ್ಬಾಳ್ಕರ್
Next: ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆಯಿಂದ ಯಾವುದೇ ರಾಜಕೀಯ ಲಾಭವಾಗುವುದಿಲ್ಲ: ಬಸವರಾಜ ಬೊಮ್ಮಾಯಿ

Related Stories

ವಿಧಾನಸೌಧದ ಕಾರ್ಯಕ್ರಮದಲ್ಲಿ ಅಧಿಕಾರಿಗಳ ನಡುವೆ ನಡೆದು ಬರುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಆಟೋ ಚಾಲಕನ ಫೋನ್‌ನಿಂದ ಸಿಎಂ ನಿವಾಸಕ್ಕೆ ಹುಸಿ ಬಾಂಬ್ ಕರೆ: ಸದಾಶಿವನಗರ ಪೊಲೀಸರಿಂದ 20 ವರ್ಷದ ಯುವಕನ ಬಂಧನ

The Bengaluru Live November 27, 2026 2:11 PM
ರಾತ್ರಿ ಮೋಟಾರ್‌ಸೈಕಲ್ ಬಳಿ ಸಿಸಿಬಿ ಎಂದು ಬರೆದ ಜಾಕೆಟ್ ಧರಿಸಿರುವ ಇಬ್ಬರು ಸಿವಿಲ್ ಉಡುಪಿನ ಅಧಿಕಾರಿಗಳು, ಬೆಂಗಳೂರು ನಗರ ಪೊಲೀಸ್ ವಿಡಿಯೋದಿಂದ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ 10 ರೌಡಿಗಳ ಬಂಧನ: “ಅಪರಾಧ ಚಟುವಟಿಕೆಗಳಿಗೆ ಜಾಗವಿಲ್ಲ” ಎಂದ ಪೊಲೀಸರು

The Bengaluru Live November 27, 2026 2:10 PM
ಬಿಸಿಐಸಿ ಸಿಎಸ್‌ಆರ್ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ 2026ರ ಹಿನ್ನೆಲೆಯ ಮುಂದೆ ವೇದಿಕೆಯ ಮೇಲೆ ಕುಳಿತು ಮತ್ತು ನಿಂತು ಗುಂಪು ಚಿತ್ರಕ್ಕೆ ಭಂಗಿ ನೀಡಿರುವ ಗಣ್ಯರು
  • ಬೆಂಗಳೂರು ನಗರ

ಸಿಎಸ್‌ಆರ್ ಕೇವಲ ಕಾನೂನು ಬಾಧ್ಯತೆಯಲ್ಲ, ಅಭಿವೃದ್ಧಿ ಹೊಂದಿದ ಭಾರತಕ್ಕೆ ಹೂಡಿಕೆ: ಬಿಸಿಐಸಿ ಸುವರ್ಣ ಮಹೋತ್ಸವದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್

The Bengaluru Live November 27, 2026 2:05 PM

Latest Post

ಆಟೋ ಚಾಲಕನ ಫೋನ್‌ನಿಂದ ಸಿಎಂ ನಿವಾಸಕ್ಕೆ ಹುಸಿ ಬಾಂಬ್ ಕರೆ: ಸದಾಶಿವನಗರ ಪೊಲೀಸರಿಂದ 20 ವರ್ಷದ ಯುವಕನ ಬಂಧನ ವಿಧಾನಸೌಧದ ಕಾರ್ಯಕ್ರಮದಲ್ಲಿ ಅಧಿಕಾರಿಗಳ ನಡುವೆ ನಡೆದು ಬರುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಆಟೋ ಚಾಲಕನ ಫೋನ್‌ನಿಂದ ಸಿಎಂ ನಿವಾಸಕ್ಕೆ ಹುಸಿ ಬಾಂಬ್ ಕರೆ: ಸದಾಶಿವನಗರ ಪೊಲೀಸರಿಂದ 20 ವರ್ಷದ ಯುವಕನ ಬಂಧನ

November 27, 2026 2:11 PM
ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ 10 ರೌಡಿಗಳ ಬಂಧನ: “ಅಪರಾಧ ಚಟುವಟಿಕೆಗಳಿಗೆ ಜಾಗವಿಲ್ಲ” ಎಂದ ಪೊಲೀಸರು ರಾತ್ರಿ ಮೋಟಾರ್‌ಸೈಕಲ್ ಬಳಿ ಸಿಸಿಬಿ ಎಂದು ಬರೆದ ಜಾಕೆಟ್ ಧರಿಸಿರುವ ಇಬ್ಬರು ಸಿವಿಲ್ ಉಡುಪಿನ ಅಧಿಕಾರಿಗಳು, ಬೆಂಗಳೂರು ನಗರ ಪೊಲೀಸ್ ವಿಡಿಯೋದಿಂದ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ 10 ರೌಡಿಗಳ ಬಂಧನ: “ಅಪರಾಧ ಚಟುವಟಿಕೆಗಳಿಗೆ ಜಾಗವಿಲ್ಲ” ಎಂದ ಪೊಲೀಸರು

November 27, 2026 2:10 PM
ಸಿಎಸ್‌ಆರ್ ಕೇವಲ ಕಾನೂನು ಬಾಧ್ಯತೆಯಲ್ಲ, ಅಭಿವೃದ್ಧಿ ಹೊಂದಿದ ಭಾರತಕ್ಕೆ ಹೂಡಿಕೆ: ಬಿಸಿಐಸಿ ಸುವರ್ಣ ಮಹೋತ್ಸವದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್ ಬಿಸಿಐಸಿ ಸಿಎಸ್‌ಆರ್ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ 2026ರ ಹಿನ್ನೆಲೆಯ ಮುಂದೆ ವೇದಿಕೆಯ ಮೇಲೆ ಕುಳಿತು ಮತ್ತು ನಿಂತು ಗುಂಪು ಚಿತ್ರಕ್ಕೆ ಭಂಗಿ ನೀಡಿರುವ ಗಣ್ಯರು
  • ಬೆಂಗಳೂರು ನಗರ

ಸಿಎಸ್‌ಆರ್ ಕೇವಲ ಕಾನೂನು ಬಾಧ್ಯತೆಯಲ್ಲ, ಅಭಿವೃದ್ಧಿ ಹೊಂದಿದ ಭಾರತಕ್ಕೆ ಹೂಡಿಕೆ: ಬಿಸಿಐಸಿ ಸುವರ್ಣ ಮಹೋತ್ಸವದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್

November 27, 2026 2:05 PM
814 ಪಿಯು ಉಪನ್ಯಾಸಕ ಹುದ್ದೆಗಳಿಗೆ ಕೆಇಎ ಅಧಿಸೂಚನೆ: ಡಿ.25ರೊಳಗೆ ಅರ್ಜಿ ಸಲ್ಲಿಸಿ; ವಾಣಿಜ್ಯ, ಇಂಗ್ಲಿಷ್, ಕಂಪ್ಯೂಟರ್ ಸೈನ್ಸ್‌ನಲ್ಲಿ ಹೆಚ್ಚು ಹುದ್ದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಾಮಫಲಕ ಮತ್ತು ಲೋಗೋ ಮುಂದೆ ಮೇಜಿನ ಬಳಿ ಕುಳಿತು ಮಾತನಾಡುತ್ತಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಕರ್ನಾಟಕ

814 ಪಿಯು ಉಪನ್ಯಾಸಕ ಹುದ್ದೆಗಳಿಗೆ ಕೆಇಎ ಅಧಿಸೂಚನೆ: ಡಿ.25ರೊಳಗೆ ಅರ್ಜಿ ಸಲ್ಲಿಸಿ; ವಾಣಿಜ್ಯ, ಇಂಗ್ಲಿಷ್, ಕಂಪ್ಯೂಟರ್ ಸೈನ್ಸ್‌ನಲ್ಲಿ ಹೆಚ್ಚು ಹುದ್ದೆ

November 27, 2026 12:02 PM
ಕುಲ-ಕುಲವೆಂದು ಹೊಡೆದಾಡಬೇಡಿ, ಕನಕದಾಸರ ಮಾನವೀಯತೆಯ ಹಾದಿ ಹಿಡಿಯಿರಿ: ಹಾವೇರಿಗೆ ತೆರಳುವ ಮುನ್ನ ಸಿಎಂ ಡಿ.ಕೆ. ಶಿವಕುಮಾರ್ ಹೂವುಗಳಿಂದ ಅಲಂಕರಿಸಿದ, ಏಕತಾರಿ ಹಿಡಿದ ಕನಕದಾಸರ ಪ್ರತಿಮೆಯ ಮುಂದೆ ಕೈಮುಗಿದು ನಿಂತಿರುವ ನಾಯಕರು, ಹೂವುಗಳ ನಡುವೆ ದಾಸರ ಭಾವಚಿತ್ರ
  • ಕರ್ನಾಟಕ

ಕುಲ-ಕುಲವೆಂದು ಹೊಡೆದಾಡಬೇಡಿ, ಕನಕದಾಸರ ಮಾನವೀಯತೆಯ ಹಾದಿ ಹಿಡಿಯಿರಿ: ಹಾವೇರಿಗೆ ತೆರಳುವ ಮುನ್ನ ಸಿಎಂ ಡಿ.ಕೆ. ಶಿವಕುಮಾರ್

November 27, 2026 11:49 AM
ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ 2026 ಕಟ್‌ಆಫ್ ಪ್ರಕಟ: ಉಳಿಕೆ ಮೂಲ ವೃಂದದಲ್ಲಿ ಜಿಎಂ 206.5, ಕಲ್ಯಾಣ ಕರ್ನಾಟಕ ವೃಂದದಲ್ಲಿ 210 ಬೆಂಗಳೂರಿನ ಕರ್ನಾಟಕ ಲೋಕಸೇವಾ ಆಯೋಗದ ಕಚೇರಿ ಕಟ್ಟಡ
  • ಕರ್ನಾಟಕ

ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ 2026 ಕಟ್‌ಆಫ್ ಪ್ರಕಟ: ಉಳಿಕೆ ಮೂಲ ವೃಂದದಲ್ಲಿ ಜಿಎಂ 206.5, ಕಲ್ಯಾಣ ಕರ್ನಾಟಕ ವೃಂದದಲ್ಲಿ 210

November 27, 2026 11:45 AM

ನೀವು ತಪ್ಪಿಸಿಕೊಂಡಿರಬಹುದು

ವಿಧಾನಸೌಧದ ಕಾರ್ಯಕ್ರಮದಲ್ಲಿ ಅಧಿಕಾರಿಗಳ ನಡುವೆ ನಡೆದು ಬರುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಆಟೋ ಚಾಲಕನ ಫೋನ್‌ನಿಂದ ಸಿಎಂ ನಿವಾಸಕ್ಕೆ ಹುಸಿ ಬಾಂಬ್ ಕರೆ: ಸದಾಶಿವನಗರ ಪೊಲೀಸರಿಂದ 20 ವರ್ಷದ ಯುವಕನ ಬಂಧನ

The Bengaluru Live November 27, 2026 2:11 PM
ರಾತ್ರಿ ಮೋಟಾರ್‌ಸೈಕಲ್ ಬಳಿ ಸಿಸಿಬಿ ಎಂದು ಬರೆದ ಜಾಕೆಟ್ ಧರಿಸಿರುವ ಇಬ್ಬರು ಸಿವಿಲ್ ಉಡುಪಿನ ಅಧಿಕಾರಿಗಳು, ಬೆಂಗಳೂರು ನಗರ ಪೊಲೀಸ್ ವಿಡಿಯೋದಿಂದ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ 10 ರೌಡಿಗಳ ಬಂಧನ: “ಅಪರಾಧ ಚಟುವಟಿಕೆಗಳಿಗೆ ಜಾಗವಿಲ್ಲ” ಎಂದ ಪೊಲೀಸರು

The Bengaluru Live November 27, 2026 2:10 PM
ಬಿಸಿಐಸಿ ಸಿಎಸ್‌ಆರ್ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ 2026ರ ಹಿನ್ನೆಲೆಯ ಮುಂದೆ ವೇದಿಕೆಯ ಮೇಲೆ ಕುಳಿತು ಮತ್ತು ನಿಂತು ಗುಂಪು ಚಿತ್ರಕ್ಕೆ ಭಂಗಿ ನೀಡಿರುವ ಗಣ್ಯರು
  • ಬೆಂಗಳೂರು ನಗರ

ಸಿಎಸ್‌ಆರ್ ಕೇವಲ ಕಾನೂನು ಬಾಧ್ಯತೆಯಲ್ಲ, ಅಭಿವೃದ್ಧಿ ಹೊಂದಿದ ಭಾರತಕ್ಕೆ ಹೂಡಿಕೆ: ಬಿಸಿಐಸಿ ಸುವರ್ಣ ಮಹೋತ್ಸವದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್

The Bengaluru Live November 27, 2026 2:05 PM
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಾಮಫಲಕ ಮತ್ತು ಲೋಗೋ ಮುಂದೆ ಮೇಜಿನ ಬಳಿ ಕುಳಿತು ಮಾತನಾಡುತ್ತಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಕರ್ನಾಟಕ

814 ಪಿಯು ಉಪನ್ಯಾಸಕ ಹುದ್ದೆಗಳಿಗೆ ಕೆಇಎ ಅಧಿಸೂಚನೆ: ಡಿ.25ರೊಳಗೆ ಅರ್ಜಿ ಸಲ್ಲಿಸಿ; ವಾಣಿಜ್ಯ, ಇಂಗ್ಲಿಷ್, ಕಂಪ್ಯೂಟರ್ ಸೈನ್ಸ್‌ನಲ್ಲಿ ಹೆಚ್ಚು ಹುದ್ದೆ

The Bengaluru Live November 27, 2026 12:02 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಆಟೋ ಚಾಲಕನ ಫೋನ್‌ನಿಂದ ಸಿಎಂ ನಿವಾಸಕ್ಕೆ ಹುಸಿ ಬಾಂಬ್ ಕರೆ: ಸದಾಶಿವನಗರ ಪೊಲೀಸರಿಂದ 20 ವರ್ಷದ ಯುವಕನ ಬಂಧನ
  • ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ 10 ರೌಡಿಗಳ ಬಂಧನ: “ಅಪರಾಧ ಚಟುವಟಿಕೆಗಳಿಗೆ ಜಾಗವಿಲ್ಲ” ಎಂದ ಪೊಲೀಸರು
  • ಸಿಎಸ್‌ಆರ್ ಕೇವಲ ಕಾನೂನು ಬಾಧ್ಯತೆಯಲ್ಲ, ಅಭಿವೃದ್ಧಿ ಹೊಂದಿದ ಭಾರತಕ್ಕೆ ಹೂಡಿಕೆ: ಬಿಸಿಐಸಿ ಸುವರ್ಣ ಮಹೋತ್ಸವದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್
  • 814 ಪಿಯು ಉಪನ್ಯಾಸಕ ಹುದ್ದೆಗಳಿಗೆ ಕೆಇಎ ಅಧಿಸೂಚನೆ: ಡಿ.25ರೊಳಗೆ ಅರ್ಜಿ ಸಲ್ಲಿಸಿ; ವಾಣಿಜ್ಯ, ಇಂಗ್ಲಿಷ್, ಕಂಪ್ಯೂಟರ್ ಸೈನ್ಸ್‌ನಲ್ಲಿ ಹೆಚ್ಚು ಹುದ್ದೆ
©Copyright 2025 The Bengaluru Live All rights reserved. | MoreNews by AF themes.