ಬೆಂಗಳೂರು: ಬಿಬಿಎಂಪಿಯ ದಕ್ಷಿಣ ವಲಯದ ವ್ಯಾಪ್ತಿಯಲ್ಲಿ ಬ್ಯಾಗ್ ಮಾರಾಟ ಮಾಡುತ್ತಿದ್ದ ವೃದ್ಧನನ್ನು ಬಿಬಿಎಂಪಿಯ ಮಾರ್ಷಲ್‍ಗಳು ತಡೆದು, ಅಮಾನವೀಯವಾಗಿ ನಡೆದುಕೊಂಡಿರುವ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದು, ಬಿಜೆಪಿ ತನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್‍ನಿಂದ ಪ್ರೇರೇಪಣೆ ಪಡೆದು ಕೆಲವು ಬಿಬಿಎಂಪಿಯ ಮಾರ್ಷಲ್‍ಗಳು ಈಗ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿಯು ಟೀಕಿಸಿದೆ.
ರಾಜ್ಯದಲ್ಲಿ @INCKarnataka ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್‍ನಿಂದ ಪ್ರೇರೇಪಣೆ ಪಡೆದು ಕೆಲವು ಬಿಬಿಎಂಪಿಯ ಮಾರ್ಷಲ್‍ಗಳು ಈಗ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ.
— BJP Karnataka (@BJP4Karnataka) March 27, 2024
ನಿಯತ್ತಾಗಿ ಕಷ್ಟಪಟ್ಟು ಇಳಿ ವಯಸ್ಸಿನಲ್ಲೂ ದುಡಿಯುವ ವೃದ್ಧನ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆಸಿರುವುದು ಮಜಾವಾದಿ @siddaramaiah ಸರ್ಕಾರ ಸೃಷ್ಟಿಸಿರುವ ಅರಾಜಕತೆಗೆ… pic.twitter.com/tJJ3XCOLfJ
ನಿಯತ್ತಾಗಿ ಕಷ್ಟಪಟ್ಟು ಇಳಿ ವಯಸ್ಸಿನಲ್ಲೂ ದುಡಿಯುವ ವೃದ್ಧನ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆಸಿರುವುದು ಮಜಾವಾದಿ ಸಿದ್ದರಾಮಯ್ಯ ಸರಕಾರ ಸೃಷ್ಟಿಸಿರುವ ಅರಾಜಕತೆಗೆ ಸಾಕ್ಷಿಯಾಗಿದೆ. ದುಡಿದು ತಿನ್ನುವ ಅಮಾಯಕರ ಮೇಲೆ ದೌರ್ಜನ್ಯ ಮಾತ್ರ ತಪ್ಪಿಲ್ಲ ಎಂದು ಉಲ್ಲೇಖಿಸಿದೆ.