Home ಬೆಂಗಳೂರು ನಗರ BBMP Property Tax 2023: ಶೇ 5% ರಷ್ಟು ರಿಯಾಯಿತಿಗೆ ಜೂನ್ ವರಗೆ ವಿಸ್ತರಿಸಲು ಮನವಿ

BBMP Property Tax 2023: ಶೇ 5% ರಷ್ಟು ರಿಯಾಯಿತಿಗೆ ಜೂನ್ ವರಗೆ ವಿಸ್ತರಿಸಲು ಮನವಿ

38
0
BBMP Property Tax 2023: Request to extend 5% discount till June
BBMP Property Tax 2023: Request to extend 5% discount till June

ಬೆಂಗಳೂರು:

ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವತ್ತುಗಳಿಗೆ ಆಸ್ತಿ ತೆರಿಗೆ ಪಾವತಿಸುತ್ತಿರುವ ತೆರಿಗೆದಾರರಿಗೆ ಶೇ 5% ರಷ್ಟು ರಿಯಾಯಿತಿ ಅನ್ನು ವಿಸ್ತರಿಸುವ ಕುರಿತು ಮನವಿ ಪತ್ರವನ್ನು ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು, ಮಾಜಿ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ರವರು, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮೋಹನ್ ಕುಮಾರ್ ರವರು ಮನವಿ ಸಲ್ಲಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಪ್ರತಿ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸುವ ತೆರಿಗೆದಾರರಿಗೆ ಶೇ.5 ರಷ್ಟು ರಿಯಾಯಿತಿ ಅನ್ನು ನೀಡಲಾಗುತ್ತಿತ್ತು.

ಆದರೆ, 2023-24ನೇ ಸಾಲಿನಲ್ಲಿ, ಏಪ್ರಿಲ್ ತಿಂಗಳಿನಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಿದ ತೆರಿಗೆದಾರರಿಗೆ ಮಾತ್ರ ಶೇ.5 ರಷ್ಟು ರಿಯಾಯಿತಿಯನ್ನು ನೀಡಲಾಗಿರುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಕೆಲಸಗಳು ಚಾಲ್ತಿಯಲ್ಲಿದ್ದ ಕಾರಣ ಕಂದಾಯ ವಿಭಾಗದ ಎಲ್ಲಾ ಸಿಬ್ಬಂಧಿಗಳು ಚುನಾವಣಾ ಕೆಲಸ ಕಾರ್ಯಗಳಲ್ಲಿ ತೊಡಿಗಿಸಿಕೊಂಡಿದ್ದು, ಹಲವಾರು ತೆರಿಗೆದಾರರು ನಿಗದಿತ ಸಮಯದಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಲು ಸಾಧ್ಯವಾಗಿರುವುದಿಲ್ಲ.

ಪ್ರಸುತ್ತ ಚುನಾವಣೆ ಕೆಲಸ ಕಾರ್ಯಗಳು ಮುಕ್ತಾಯಗೊಂಡಿರುವುದರಿಂದ ಹಾಗೂ ಸಾರ್ವಜನಿಕರ ಆಥಿ೯ಕ ಹಿತದೃಷ್ಟಿಯಿಂದ ಪ್ರತಿ ವರ್ಷದಂತೆ ನಿಗಧಿತ ಸಮಯದಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸುವ ತೆರಿಗೆದಾರರಿಗೆ ಶೇಕಡ 5%ರಷ್ಟು ರಿಯಾಯಿತಿ ಅನ್ನು 1 ತಿಂಗಳು ವಿಸ್ತರಿಸಬೇಕೆಂದು ಮನವಿ ಸಲ್ಲಿಸಿದರು.

LEAVE A REPLY

Please enter your comment!
Please enter your name here