Home ಆರೋಗ್ಯ ಬಿಬಿಎಂಪಿಯಿಂದ ಬೆಳ್ಳಂದೂರು ಅಪಾರ್ಟ್’ಮೆಂಟ್ ಸೀಲ್ಡೌನ್

ಬಿಬಿಎಂಪಿಯಿಂದ ಬೆಳ್ಳಂದೂರು ಅಪಾರ್ಟ್’ಮೆಂಟ್ ಸೀಲ್ಡೌನ್

115
0

ಮೊದಲ ಪ್ರಕರಣ ಪತ್ತೆಯಾದ ಕೇವಲ 4 ದಿನಗಳಲ್ಲಿ 10 ಮಂದಿಯಲ್ಲಿ ಸೋಂಕು

ಬೆಂಗಳೂರು:

ಬಿಬಿಎಂಪಿ ಅಧಿಕಾರಿಗಳು ಬೆಳ್ಳಂದೂರು ಅಪಾರ್ಟ್’ಮೆಂಟ್’ನ್ನು ಸೀಲ್ಡೌನ್ ಮಾಡಿದ್ದಾರೆ. ಕೊರೋನಾ ಸೋಂಕು ಮೊದಲ ಪ್ರಕರಣ ಮತ್ತೆಯಾದ ಕೇವಲ 4 ದಿನಗಳಲ್ಲಿ 10 ಮಂದಿಯಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಬೆಳ್ಳಂದೂರು ವಾರ್ಡ್‌ನ ಅಂಬಲಿಪುರದ ಎಸ್‌ಜೆಆರ್‌ ವಾಟರ್‌ಮಾರ್ಕ್ ಅಪಾರ್ಟ್‌ಮೆಂಟ್‌ನ್ನು ಸೀಲ್ಡೌನ್ ಮಾಡಲಾಗಿದೆ.

ಎಸ್‌ಜೆಆರ್‌ ವಾಟರ್‌ಮಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಫೆ. 15ರಂದು ವ್ಯಕ್ತಿಯೊಬ್ಬರಲ್ಲು ಕೊರೋನಾ ಸೋಂಕು ದೃಢಪಟ್ಟಿತ್ತು. ಬಳಿಕ ಶುಕ್ರವಾರದವರಗೂ (ಫೆ.19) 10 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಅಪಾರ್ಟ್’ಮೆಂಟ್ ನಲ್ಲಿ ಒಟ್ಟು 1500 ನಿವಾಸಿಗಳಿದ್ದು, ಈ ವರೆಗೂ 500 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಪ್ರಸ್ತುತ ಸೋಂಕು ದೃಢಪಟ್ಟಿರುವ 10 ಮಂದಿಯಲ್ಲಿ ಐವರು ಹಿರಿಯ ನಾಗರೀಕರಾಗಿದ್ದಾರೆ. ಸೋಂಕಿತರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದರವನ್ನು ಹೋಮ್ ಐಸೋಲೇಷನ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಅಪಾರ್ಟ್’ಮೆಂಟ್ ನಲ್ಲಿ ಮೊದಲು ಸೋಂಕಿಗೊಳಗಾದ 42 ವರ್ಷದ ವ್ಯಕ್ತಿ ಕೇರಳ ಪ್ರವಾಸ ಮಾಡಿ ಬಂದಿದ್ದರು. ಇದೀಗ ವ್ಯಕ್ತಿಯ ಸ್ಯಾಂಪಲ್’ನ್ನು ಜಿನೋಮ್ ಸಿಕ್ವೆನ್ಸಿಂಗ್ ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ಅಪಾರ್ಟ್ ಮೆಂಟ್ ಸಾರ್ವಜನಿಕ ಪ್ರದೇಶಗಳಿಗೆ ಹತ್ತಿರದಲ್ಲೇ ಇರುವುದರಿಂದ ಸೋಂಕು ಹರಡದಂತೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ಅಪಾರ್ಟ್’ಮೆಂಟ್’ನ್ನು ಸೀಲ್ಡೌನ್ ಮಾಡಿದ್ದಾರೆ. ಸೀಲ್ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಅಪಾರ್ಟ್’ಮೆಂಟ್ ಒಳಹೋಗುವುದು ಹಾಗೂ ಹೊರಬರುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ನಗರದಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಕ್ಷಣ ಇರುವವರು ಅಥವಾ ಕೇರಳ ಹಾಗೂ ಮಹಾರಾಷ್ಟ್ರದಿಂದ ಪ್ರವಾಸ ಹೋಗಿ ಬಂದವರು ಕೂಡಲೇ ಕೊರೋನಾ ಪರೀಕ್ಷೆಗೊಳಗಾಗುವಂತೆ ಬಿಬಿಎಂಪಿ ಅಧಇಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here