Home ಬೆಂಗಳೂರು ನಗರ ಪತ್ರಕರ್ತರ ಆರೋಗ್ಯಕ್ಕೆ 2 ಕೋಟಿ ರು. – ರಾಕೇಶ್ ಸಿಂಗ್

ಪತ್ರಕರ್ತರ ಆರೋಗ್ಯಕ್ಕೆ 2 ಕೋಟಿ ರು. – ರಾಕೇಶ್ ಸಿಂಗ್

83
0
BBMP to allot Rs 2 crore for health treatment of journalists in Bengaluru Administrator Rakesh Singh

ಸಣ್ಣ ಪತ್ರಿಕೆಗಳ ಜಾಹಿರಾತಿಗೆ ಆರ್ಥಿಕ ನೆರವು ಶೀಘ್ರ

ಬೆಂಗಳೂರು:

ಬಿಬಿಎಂಪಿ ವ್ಯಾಪ್ತಿಯ ಪತ್ರಕರ್ತರ ಚಿಕಿತ್ಸಾ ವೆಚ್ಚ ಭರಿಸುವ ಅನುದಾನ 2 ಕೋಟಿ ರು. ಒದಗಿಸುವುದಾಗಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹೇಳಿದ್ದಾರೆ.

ಈ ಬಾರಿ ಬಿಬಿಎಂಪಿ ಬಜೆಟ್ ನಲ್ಲಿ ಪತ್ರಕರ್ತರ ಚಿಕಿತ್ಸಾ ವೆಚ್ಚ ಭರಿಸುವ ಅನುದಾನ ಒದಗಿಸಬೇಕೆಂದು ಒತ್ತಾಯಿಸಲು ತಮ್ಮನ್ನು ಭೇಟಿ ಮಾಡಿದ್ದ ಪತ್ರಕರ್ತರಿಗೆ ಅವರು ಹೇಳಿದರು.

ಕಳೆದ ಎರಡು ವರ್ಷಗಳಿಂದ ಬಿಬಿಎಂಪಿ ಬಜೆಟ್ ನಲ್ಲಿ ಪತ್ರಕರ್ತರ ಚಿಕಿತ್ಸಾ ವೆಚ್ಚ ಭರಿಸಲು ಅನುದಾನ ಮೀಸಲಿಡಲಾಗುತ್ತದೆ. ಆದರೆ ಈ ಬಾರಿ ಬಜೆಟ್ ನಲ್ಲಿ ಪತ್ರಕರ್ತರ ಯಾವುದೇ ಬೇಡಿಕೆಗಳನ್ನು ಈಡೇರಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಪತ್ರಕರ್ತರ ಸಮೂಹ ಗುರುವಾರ ಆಡಳಿತಾಧಿಕಾರಿ ಅವರನ್ನು ಭೇಟಿ ಮಾಡಿ ಆಕ್ಷೇಪ ವ್ಯಕ್ತಪಡಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವವಾಣಿ ಪತ್ರಿಕೆ ಸುದ್ದಿ ಸಂಪಾದಕ ಶಿವಕುಮಾರ್ ಬೆಳ್ಳಿತಟ್ಟೆ, ಪ್ರತಿವರ್ಷ ಪತ್ರಕರ್ತರ ಚಿಕಿತ್ಸಾ ವೆಚ್ಚ ಭರಿಸಲು ಬಿಬಿಎಂಪಿಯಲ್ಲಿ ಒಂದು ಕೋಟಿ ಅನುದಾನ ಒದಗಿಸಲಾಗಿತ್ತು. ಸಣ್ಣ ಪತ್ರಿಕೆಗಳ ಪುನಶ್ಚೇತನಕ್ಕಾಗಿ ಜಾಹಿರಾತು ಒದಗಿಸಲು  ಅನುದಾನ ಮೀಸಲಾಗಿತ್ತು. ಎಲ್ಲವನ್ನು ಅಧಿಕಾರಿಗಳು ರದ್ದುಗೊಳಿಸಿದ್ದಾರೆಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಪತ್ರಕರ್ತರ ಬೇಡಿಕೆಗಳ ಪರವಾಗಿ ನಾನಿದ್ದೇನೆ. ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ನಾನು ನಿಮ್ಮ ಪರ ನಿಲ್ಲುತ್ತೇನೆ ಎಂದು ಬೆಂಬಲ ವತ್ತ ಪಡಿಸಿದರು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಮಾತನಾಡಿ, ಪತ್ರಕರ್ತರ ಚಿಕಿತ್ಸಾ ವೆಚ್ಚ ಮರವನ್ನು ಹೆಚ್ಚು ಮಾಡಲಾಗುತ್ತದೆ. ಹಾಗೆಯೇ ಪತ್ರಕರ್ತರ ಜಾಹಿರಾತು ಒದಗಿಸುವುದಕ್ಕೆ ಅನುದಾನ ನೀಡುತ್ತೇವೆ. ಜೊತೆಗೆ ಮಾಧ್ಯಮ ಕೇಂದ್ರ ನಿರ್ಮಾಣಕ್ಕೆ ಅನುದಾನ ಮೀಸಲಿಡಲಾಗುವುದು ಎಂದು ಹೇಳಿದರು.

ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸ್ವಾಮಿ, ಪತ್ರಕರ್ತರಾದ ಅತುಲ್  ಚತುರ್ವೇದಿ,  ಲಿಂಗರಾಜು, ಅನಿಲ್ ಕುಮಾರ್, ಚಂದ್ರಶೇಖರ್ ,  ರಮೇಶ್ ಹಿರೇಜಂಬೂರ್ ಶ್ಯಾಮ್ ಹೆಬ್ಬಾರ್, ಛಾಯಾಗ್ರಾಹಕ ಪ್ರಭು, ನರಸಿಂಹಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here