ಬೆಂಗಳೂರು;- ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕಿಡಿಕಾರಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಪಠ್ಯ ಬದಲಾವಣೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಶನ್ ವತಿಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಪೀಪಲ್ಸ್ ಫೋರಂ ರಾಜ್ಯ ಪ್ರವಾಸ ಮಾಡಿ, ಮಾಹಿತಿ ಸಂಗ್ರಹ ಮಾಡುವ ಕೆಲಸ ಮಾಡಿದೆ. ಶಿಕ್ಷಣ ರಾಜಕೀಯದಿಂದ ದೂರ ಇರಬೇಕು ಅಂತ ಎಲ್ಲರ ಭಾವನೆ. ಒಂದಷ್ಟು ಜನ ಶಿಕ್ಷಣವನ್ನು ರಾಜಕೀಯಕ್ಕೆ ಹೋಗದೆ, ಮುಂದಿನ ಪೀಳಿಗೆಗೆ ಹೇಗೆ ಇರಬೇಕು ಏಂದು ಆಲೋಚಿಸುವವರು ಇದ್ದಾರೆ. ಆದರೆ ಪರಿಷ್ಕೃತ ಪಠ್ಯವನ್ನು ರಾಜ್ಯ ಸರ್ಕಾರ ಹಿಂಪಡೆಯಲು ಮುಂದಾಗಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಿಬಿಎಸ್‌ಸಿ, ಐಸಿಎಸ್‌ಸಿ ಶಾಲೆಗಳಲ್ಲಿ ಈಗಾಗಲೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಆದರೆ, ಫೀಸ್ ಕಟ್ಟಲು ಸಾಧ್ಯವಿಲ್ಲದ ಮಕ್ಕಳಿರುವ ಸರ್ಕಾರಿ ಶಾಲೆಗಳಲ್ಲಿ ಮಾತ್ರ ರಾಜ್ಯ ಶಿಕ್ಷಣ ನೀತಿ ನಡೆಯುತ್ತದೆ.
ಡಿಕೆಶಿ, ಎಂಬಿ ಪಾಟೀಲ್, ಖರ್ಗೆ, ಖಂಡ್ರೆ ಅವರ ಶಾಲೆಗಳಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯ ಇರುತ್ತದೆ. ಈ ತರಹದ ಹುಡುಗಾಟದ ವ್ಯವಸ್ಥೆ ರಾಜ್ಯದಲ್ಲಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕಿಡಿಕಾರಿದ್ದಾರೆ.