ಬೆಂಗಳೂರು: ಅಕ್ರಮಗಳಿಂದ್ಲೇ ಹೆಸರು ಮಾಡಿರೋ ಬಿಡಿಎ ಒಳಗಿನ ಬ್ರಹ್ಮಾಂಡ ಭ್ರಷ್ಟಚಾರಗಳು ಬಯಲಾಗುವ ಕಾಲ ಸನ್ನಿಹಿತವಾಗಿದೆ. ಇಲ್ಲಿ ವರ್ಷಾಗಟ್ಟಲೆ ಬಿಲಗಳನ್ನ ತೋಡಿಕೊಂಡು ಹೆಗ್ಗಣಗಳು ಸಿಕ್ಕಪಟ್ಟೆ ಮೆಯ್ದಿದಿವೆ.ಇದೀಗ ಭ್ರಷ್ಟ ಅಧಿಕಾರಿಗಳ ಭೇಟೆಗೆ ಸರ್ಕಾರ ಸದ್ದಿಲ್ಲದೆ ತನಿಖೆ ಶುರು ಮಾಡ್ತಾ ಇದೆ.ಪ್ರಾಧಿಕಾರದಲ್ಲಿ ನಡೆದಿರುವ ಕೋಟ್ಯಾಂತರ ರೂ ಹಗರಣಗಳ ತನಿಖೆಗೆ ಸರ್ಕಾರ ಮುಂದಾಗಿದ್ದು, ಕೋಟಿ ಕೋಟಿ ನುಂಗಿದವರಿಗೆ ಚಳಿ ಜ್ವರ ಬರೋದಕ್ಕೆ ಶುರುವಾಗಿದೆ. ಹಾಗಾದ್ರೆ ಯಾವೆಲ್ಲಾ ಹಗರಣಗಳು ತನಿಖೆಯಾಗಲಿ ಅನ್ನೋದನ್ನ ತೋರಿಸುತ್ತೇವೆ ಈ ಕಂಪ್ಲೀಟ್ ರಿಪೋರ್ಟ್ನಲ್ಲಿ.
ಬಿಡಿಎ ಇದು ಭ್ರಷ್ಟರ ಸಾಮಾಜ್ರ್ಯ ಅನ್ನೋದು ಎಲ್ಲಾರಿಗೂ ಗೊತ್ತಿರೋ ವಿಚಾರವೇ.ಹೆಜ್ಜೆ ಹೆಜ್ಜೆಗೂ ಲಂಚ ಲಂಚ ಕೊಟ್ರೇನ ಕೆಲ್ಸ ನಡೆಯೋದು.ಇಲ್ಲಿ ನಡೆಯುವ ಅಕ್ರಮಗಳು ಒಂದಲ್ಲ ಎರಡೆರಡು ಅಲ್ಲ ಬಿಡಿ.ಸಾರ್ವಜನಿಕ ಸ್ವತ್ತನ್ನ ಗುಳಂ ಮಾಡೋದಕ್ಕೆ ಅಂತ ಇಲ್ಲಿಗೆ ಅಧಿಕಾರಿಗಳು ಬರುತ್ತಾರೆ.ಇದೀಗ ಇಲ್ಲಿ ನಡೆದಿರುವ ಹಗರಣಗಳನ್ನ ತನಿಖೆ ನಡೆಸಿ, ಭ್ರಷ್ಟರನ್ನ ಬೀದಿಗೆ ತರಲು ಸರ್ಕಾರ ಮುಂದಾಗಿದೆ.. ಕಳೆದ ಹಲವು ವರ್ಷಗಳಲ್ಲಿ ನಡೆದಿದೆ ಎನ್ನಲಾದ ಹಗರಣಗಳ ತನಿಖೆ ನಡೆಸಲು ಸರ್ಕಾರ ಸದ್ದಿಲ್ಲದ ಯತ್ನ ಮಾಡ್ತಿದೆ. ಹೀಗಾಗಿ ಬಡವರ ಕಾಸು ತಿಂದಿರೋ ಹಿಂದಿನ ಆಯುಕ್ತರು, ಕಾರ್ಯದರ್ಶಿಎಸ್ಎಲ್ಓ, ಭೂಸ್ವಾಧೀನಾವಿಭಾಗದ ಡಿಸಿಗಳಿಗೆ ಆತಂಕ ಹೆಚ್ಚಿಸಿದೆ.
ಹೌದು… ಕಳೆದ ಹಲವು ವರ್ಷಗಳದಿಂದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ನಿವೇಶನಗಳನ್ನ ಅಧಿಕಾರಿಗಳು ಏಜೆಂಟರ ಜತೆ ಶಾಮೀಲಾಗಿ ಪಟ್ಟಭ್ರದ್ರ ಹಿತಾಶಕ್ತಿಗಳಿಗೆ ಮಾರಾಟ ಮಾಡಿರುವ ಆರೋಪ ಇದೆ.ಇದು ಬಿಡಿಎಗೆ ಕಪ್ಪುಚುಕ್ಕಿಯಾಗಿ ಮಾರ್ಪಟ್ಟಿದೆ. ಇದರಿಂದ ಅಧಿಕಾರಿಗಳ ಕಳ್ಳಾಟದಿಂದ ಸಾರ್ವಜನಿಕರಲ್ಲಿ ಬಿಡಿಎಗೆ ಇದ್ದ ವಿಶ್ವಾಶ ಇಲ್ಲದಂತಾಗಿದೆ. ಈ ಹಿನ್ನಲೆಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಹಗರಣಗಳನ್ನ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾದ್ರೆ ಯಾವೆಲ್ಲಾ ಕೇಸ್ ಗಳು ತನಿಖೆ ನಡೆಸಲು ಸಿದ್ದತೆ ನಡೆದಿದೆ ಅಂತ ನೋಡೋದಾದ್ರೆ.. ..
– ಸಗಟು ಸೈಟ್ ಹಂಚಿಕೆ ಹೆಸರಿನಲ್ಲಿ ನಡೆದಿರುವ ಕೋಟಿ ಕೋಟಿ ಅಕ್ರಮ
– ಕಾರ್ನರ್ ಸೈಟ್ ಹಂಚಿಕೆಯಲ್ಲಿ ನಡೆದಿರುವ ಕೋಟಿ ಕೋಟಿ ಅಕ್ರಮ ಅರೋಪ ಕೇಸ್
– ಸಿಎ ಸೈಟ್ ಗಳನ್ನ ಅಕ್ರಮವಾಗಿ ಹಂಚಿಕೆ ಮಾಡಿರೋ ಆರೋಪ
– ಟಿಟಿಆರ್ ನಲ್ಲಿ ನಡೆದಿದೆ ಎನ್ನಲಾದ ಕೋಟ್ಯಾಂತರ ರೂ ಹಗರಣ
– ಟ್ರಿನಿಟಿ ಅಸೋಸಿಯೇಷನ್ ಗೆ ಅಕ್ರಮವಾಗಿ 35 ಸೈಟ್ ಹಂಚಿಕೆ ಮಾಡಿ 100 ಕೋಟಿ ಲೂಟಿ
– ಕೆಂಪೇಗೌಡ ಹಾಗೂ ಅರ್ಕಾವತಿ ಬಡಾವಣೆಯಲ್ಲಿ ನಕಲಿ ರೈತರಿಗೆ ಪರಿಹಾರ
– ಖಾಲಿ ಜಾಗಕ್ಕೆ ಫೆನ್ಸಿಂಗ್ ಹಾಕುತ್ತೇವೆ ಅಂತ ಲೂಟಿ ಕೇಸ್
-ಭೂಸ್ವಾದೀನಾ ವಿಭಾಗದಲ್ಲಿ ಒಂದೇ ಜಾಗಕ್ಕೆ ಎರಡೆರೆಡು ಬಾರಿ ಪರಿಹಾರ
ಕೆಂಪೇಗೌಡ ಬಡಾವಣೆ ಅಭಿವೃದ್ದಿಗೆ ಕರೆಯಲಾದ ಟೆಂಡರ್ ಗೋಲ್ಮಾಲ್
ಲೇಔಟ್ ಗಳ ನ ಅಭಿವೃದ್ದಿ ಹೆಸರಿನಲ್ಲಿ ಟೆಂಡರ್ ಗೋಲ್ಮಾಲ್
ಬಿಡಿಎ ನಲ್ಲಿ ನಡೆದಿರುವ ಹತ್ತಕ್ಕಿಂತ ಹೆಚ್ಚು ಕೇಸ್ ಗಳನ್ನ ತನಿಖಾಧಿಕಾರಿಗಳ ಹೆಗ್ಗಲಿಗೆ ಹಾಕಲು ಸರ್ಕಾರ ತೀರ್ಮಾನ ,ಮಾಡಿದೆ.ತಪ್ಪಿಸ್ಥರಿಗೆ ಶಿಕ್ಷೆ ಕೊಡಿಸಿ ಮತ್ತೆ ಬಿಡಿಎ ಯನ್ನ ಸಾರ್ವಜನಿಕ ಸ್ನೇಹಿಯನ್ನಾಗಿ ಮಾಡಲು ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ. ಈ ಹಿಂದೇ ಬಿಡಿಎ ನಲ್ಲಿ ಕಾರ್ಯನಿರ್ವಹಿಸಿದ್ದ ಕಾರ್ಯದರ್ಶಿ, ಆಯುಕ್ತರು, ಉಪಆಯುಕ್ತರ ಕೊರಳಿಗೆ ಸುತ್ತಿಕೊಳ್ಳುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಬಿಡಿಎ ಸಂಪತ್ತುನ್ನ ಲೂಟಿ ಮಾಡಿರುವ ಅಧಿಕಾರಿಗಳ ಭೇಟೆಗೆ ಸರ್ಕಾರ ಮುಂದಾಗಿದೆ.ಸದ್ದಿಲ್ಲದೆ ವಿಶೇಷ ತಣಡ ರಚನೆಯಾಗುತ್ತಿದ್ದು, ಯಾವೆಲ್ಲಾ ಅಧಿಕಾರಿಗಳ ಅಸಲಿ ಬಣ್ಣ ಬಯಲಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
The post BDA Scam: ಬಗೆದಷ್ಟು ಬಯಲಾಗ್ತಿದೆ ಬಿಡಿಎ ಒಳಗಿನ ಬ್ರಹ್ಮಾಂಡ ಭ್ರಷ್ಟಚಾರ: DCಗೆ ಶುರುವಾಯ್ತಾ ನಡುಕ?! appeared first on Ain Live News.