ಬೆಂಗಳೂರು: ಭ್ರಷ್ಟಚಾರ –ಅಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಲ್ಲೋ ಇಲಾಖೆಗಳಲ್ಲಿ ಕಂದಾಯ ಇಲಾಖೆ ಸಹ ಒಂದು. ಇಲ್ಲಿ ಅಧಿಕಾರಿಗಳು ಸರ್ಕಾರ ಸ್ವತ್ತನ್ನ ನುಂಗೋಕೆ ಬರ್ತಾರೆ. ಕಂದಾಯ ಇಲಾಖೆ ಅಧಿಕಾರಿಗಳ ಕೆಲ್ಸ ಸರ್ಕಾರಿ ಭೂಮಿ ಕಬಳಿಕೆಯಾಗದಂತೆ ತಡೆಯೋದ. ಆದರೆ ಖುದ್ದು ಅಧಿಕಾರಿಗಳೇ ಭೂಕಬಳಿಕೆಗೆ ಮುಂದಾದ್ರೆ ಹೇಗೆ? ದುಡ್ಡು ಕೊಟ್ರೆ ಕಂಡೋರಿಗೂ ಜಮೀನು ಬರೆದುಕೊಡಲು ಹಿರಿಯ ಅಧಿಕಾರಿಗಳು ರೆಡಿ ಆಗಿದ್ದಾರೆ. ಯಾರವರು? ಯಾವಾಗ ಈ ಪ್ರಕರಣ ನಡೆದಿದ್ದು? ಬೇಲಿಯೇ ಎದ್ದು ಹೊಲ ಮೇಯ್ದ ಕತೆಯ ಸ್ಟೋರಿ ನೀವೇ ನೋಡಿ.
ಕಂದಾಯ ಇಲಾಖೆಯಲ್ಲಿ ನಡೆಯುವ ಅಕ್ರಮಗಳು ಅಷ್ಟೆಷ್ಟು ಅಲ್ಲ. ತಹಶೀಲ್ದರ್, ಎಸಿ, ಡಿಸಿ ಕಚೇರಿಯಲ್ಲಿ ಒಂದಲ್ಲ ಅಕ್ರಮ ಯಾವಾಗಲೂ ನಡೆಯುತ್ತಲ್ಲೇ ಇರುತ್ತೆ. ಬೆಂಗಳೂರು ಜಿಲ್ಲಾಡಳಿತದಲ್ಲಿ ಸಹ ಭ್ರಷ್ಟ ಅಧಿಕಾರಿಗಳು ಸೇರಿಕೊಂಡು ಮಾಡಬಾರದ ಕೆಲಸ ಮಾಡ್ತಿದ್ದಾರೆ. ಹೌದು.. ಬೆಂಗಳೂರು ನಗರದಲ್ಲಿ ಒಂದೊಂದು ಇಂಚು ಭೂಮಿ ಕೋಟ್ಯಾಂತರ ರೂ ಬೆಲೆ ಬಾಳುತ್ತೆ. ಇದನ್ನ ಬಂಡವಾಳ ಮಾಡಿಕೊಂಡ ಕೆಲ ಕಳ್ಳ ಅಧಿಕಾರಿಗಳು ಸಿಕ್ಕಬಿಕ್ಕದವರಿಗೆಲ್ಲಾ ಮಾರಿಕೊಳ್ಳುತ್ತಿದ್ದಾರೆ.ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಬೆಂಗಳೂರು ದಕ್ಷಿಣ ಎಸಿ ಕಚೇರಿಯಲ್ಲಿ ನಡೆದಿರೋ ಗೋಲ್ಮಾಲ್
ಸರ್ಕಾರಿ ಆಸ್ತಿ, ಭೂಮಿಯನ್ನು ರಕ್ಷಿಸಬೇಕಾಗಿರುವುದು ಕಂದಾಯ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ, ಎಸಿ, ತಹಶೀಲ್ದಾರ್ ಮತ್ತು ಅವರ ಸಿಬ್ಬಂದಿ. ಆದ್ರೆ ಇಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಮೀನನ್ನೇ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿದ್ದಾರೆ. ದುಡ್ಡು ಕೊಟ್ರೆ ಸರಕಾರಿ ಜಮೀನು ಯಾರಿಗೆ ಬೇಕಾದ್ರೂ. ಕಂಡೋರಿಗೆ ಪರಭಾರೆ ಆಗುತ್ತೆ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿ. ಒಂದಲ್ಲ ಎರಡಲ್ಲ ಬರೋಬ್ಬರಿ 15 ಎಕರೆ, 110 ಕೋಟಿ ಮೌಲ್ಯದ ಸರ್ಕಾಕಾರಿ ಜಮೀನನನ್ನು ಖುದ್ದು ಬೆಂಗಳೂರು ದಕ್ಷಿಣ ವಿಭಾಗದ ಉಪ ವಿಭಾಗಾಧಿಕಾರಿ ಶಿವಣ್ಣ ಖಾಸಗಿ ವ್ಯಕ್ತಿ ಹೆಸರಿಗೆ ಮಾಡಿಕೊಟ್ಟಿದ್ದಾರೆ. ಇದೀಗ ಸರಕಾರಿ ಜಮೀನು ಕಂಡೋರ ಪಾಲು ಮಾಡಿದ ಎಸಿ, ಸಹಚರರ ಮೇಲೆ ಕೇಸ್ ದಾಖಲಾಗಿದೆ.
ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಉತ್ತರಹಳ್ಳಿಯ, ವಡ್ಡರಪಾಳ್ಯ ಗ್ರಾ ಸ.6, 7ರ ಸರಕಾರಿ ಜಮೀನು ಇದೆ. ಈ ಎರಡು ಸರ್ವೆ ಯಲ್ಲಿರುವ 11 ಮತ್ತು 4 ಎಕರೆ ಒಟ್ಟು 15 ಎಕರೆ ಸರಕಾರಿ ಜಮೀನು ಎಂದು ನಮೂದಾಗಿದೆ. ಆದರೆ ಇದನ್ನು ಸರಕಾರಿ ಜಮೀನು ಅಲ್ಲ ಎಂದು ನಕಲಿ ದಾಖಲೆ ಸೃಷ್ಟಿಸಿ, ಅಲ್ಲಿಯ ಕೆ ಎಸ್ ಗಿರಿನಾಥ (ಕೆ ಎಲ್ ಸ್ಚಾಮಿ) ಹೆಸರಿಗೆ ಮಾಲಿಕತ್ವ ವರ್ಗಾವಣೆ ಮಾಡಲಾಗಿದೆ. ಕಳೆದೊಂದು ವರ್ಷಷದ ಹಿಂದೆ ಈ ವರ್ಗಾವಣೆ ಆಗಿದ್ದು, ಈ ವಿಷಯ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಗಮನಕ್ಕೆ ಬರುತ್ತಿದ್ದಂತೆ ದೂರು ದಾಖಲಿಸುವಂತೆ ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್ ಶ್ರೀನಿವಾಸ್ ಸೂಚನೆ ನೀಡಲಾಗಿದೆ. ಇದರ ಹಿನ್ನೆಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಈ ಹಿಂದಿನ ಎಸಿಯಾಗಿದ್ದ ಶಿವಣ್ಣ, FDA ಜ್ಞಾನಶೇಖರ್ ವಿರುದ್ದ ದೂರುನೀಡಿದ್ದು,, ಪ್ರಕರಣ ದಾಖಲು ಮಾಡಲಾಗಿದೆ. ಸದ್ಯ ಚಿಕ್ಕಮಗಳೂರು ವಿಶೇಷ ಭೂಸ್ವಾಧೀನಾಧಿಕಾರಿ ಆಗಿರೋ ಶಿವಣ್ಣ, ರಾಜಾಜಿನಗರ ನಿರೀಕ್ಷಕರಾಗಿ ಜ್ಞಾನಶೇಖರ್ ಕಾರ್ಯ ನಿರ್ವಹಿಸುತ್ತಿದ್ದು, ಇವರ ವಿರುದ್ದ ಸೂಕ್ರ ಕ್ರಮಕ್ಕೆ ನಿರ್ಧಾರ ಮಾಡಲಾಗಿದೆ.
ಇನ್ನೂ ಎಸಿ ಶಿವಣ್ಣ ವಿರುದ್ಧ ಇದೇ ಮೊದಲೇನಲ್ಲ. ಇದೇ ರೀತಿ ಸರ್ಕಾರಿ ಜಮೀನು ಕಂಡೋರಿಗೆ ಕೋಟಿ ಕೋಟಿಗೆ ಪರಭಾರೆ ಮಾಡಿದ ಆರೋಪಗಳು ದೂರುಗಳಿವೆ. ಇವರ ಅವಧಿಯಲ್ಲಿ ನಡೆಸಿರೋ ಅಕ್ರಮಗಳನ್ನ ಕೆಣಕುಲು ಸರ್ಕಾರ ಸಹ ಮುಂದಾಗಿದೆ. ಒಟ್ಟಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ ಅಧಿಕಾರಿ ಮೇಲೆ ಕ್ರಮಕೈಗೊಳ್ಳಬೇಕು ಇದರ ಜೊತೆ ಈ ರೀತಿ ಒತ್ತುವರಿ, ಪರಭಾರೆ ಆಗಿರುವ ಸರ್ಕಾರ ಜಮೀನು ರಕ್ಷಿಸುವ ಕೆಲಸ ಮೊದಲಾಗಬೇಕಿದೆ.ಇಲ್ಲದ್ರೆ ಸರ್ಕಾರಿ ಸ್ವತ್ತು ಭೂಗಳ್ಳರು ಹಾಗೂ ಭ್ರಷ್ಟ ಅಧಿಕಾರಿಗಳ ಪಾಲಾಗೋದ್ರಲ್ಲಿ ಅನುಮಾನ ಇಲ್ಲ.