ಬೆಂಗಳೂರು: ಇವತ್ತು ನನ್ನ ಮೊಬೈಲ್ ಗೆ ಎರಡು ಬಾರಿ ಸೈರನ್ ನೊಂದಿಗೆ ಈ ರೀತಿಯ ಮೆಸೇಜ್ ಬಂದಿತ್ತು . ಈ ರೀತಿಯ ಸೈರನ್ ನೊಂದಿಂಗೆ ನಿಮ್ಮ ಮೊಬೈಲ್ ಗೂ ಮೆಸೇಜ್ ಬರುತ್ತದ. ಈ ಬಗ್ಗೆ ಯಾರು ಭಯಪಡುವ ಅವಶ್ಯಕತೆ ಇಲ್ಲ. ಇದು ನಮ್ಮ ಭಾರತ ಸರ್ಕಾರದಿಂದ ನೀಡುವ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಆಗಿರುತ್ತದೆ. ನಮ್ಮ ದೇಶ ಅಥವಾ ನಮ್ಮ ರಾಜ್ಯ ಆಪತ್ತಿನಲ್ಲಿ ಇದ್ದಾಗ ದೇಶದ ಎಲ್ಲಾ ಪ್ರಜೆಗಳಿಗೆ ಸೈರನ್ ನೊಂದಿಗೆ ಮೊಬೈಲ್ ನ ಮೂಲಕ ಈ ರೀತಿಯ ಮೆಸೇಜ್ ಬರುತ್ತದೆ. ಈಗ ಇದು ಟೆಸ್ಟಿಂಗ್ ಮೆಸೇಜ್ ಮಾತ್ರ ಆಗಿರುತ್ತದೆ
.
ಸಂದೇಶದಲ್ಲಿ ಏನಿತ್ತು..?: ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ (Alert Test Message) ಸಂದೇಶವಾಗಿದೆ. ನಿಮ್ಮ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಲಾಗಿದೆ.
ಭಯಪಡಬೇಡಿ: ಈ ಮೊದಲು ಕಳುಹಿಸಲಾಗಿದ್ದ ಸಂದೇಶದಲ್ಲಿ ಫೋನ್ ಜೋರಾಗಿ ಎಚ್ಚರಿಕೆಯ ರೀತಿಯ ಬೀಪ್ ಶಬ್ಧದೊಂದಿಗೆ ಸಂದೇಶ ಫ್ಲ್ಯಾಶ್ ಆಗಲಿದೆ. ಬಳಕೆದಾರರು ಓಕೆ ಕೊಡುವವರೆಗೂ ಈ ಶಬ್ಧ ಬರುತ್ತಲೇ ಇರುತ್ತದೆ. ಈ ಮೂಲಕ ಎಚ್ಚರಿಕೆ ಸಂದೇಶವನ್ನು ಓದಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಆದರೆ ಇದಕ್ಕೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಹೇಳಲಾಗಿತ್ತು
The post BE Alert: ಭಯಪಡಬೇಡಿ: ಮೊಬೈಲ್ʼಗಳಿಗೆ ಬಾರಿ ಸೈರನ್ʼನೊಂದಿಗೆ ಬಂದಿರೋ ಮೆಸೆಜ್ ನೋಡಿ! appeared first on Ain Live News.
