ಬೆಂಗಳೂರು: ನಗರದ ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಹೋಟೆಲಿನಲ್ಲಿ ನಡೆದಿದ್ದ ಹೊಸ ಸಿನಿಮಾಗಳ ಲಾಂಚ್ ಇವೆಂಟ್ ನಂತರ ನಡೆದ ಪಾರ್ಟಿಯಲ್ಲಿ ಮಾತಿಗೆ ಮಾತು ಬೆಳೆದು ಸ್ನೇಹಿತ ವಿಜಯ್ ಬಿಯರ್ ಬಾಟಲ್ನಿಂದ ಭವಿತ್ ಎಂಬ ಖಾಸಗಿ ವಾಹಿನಿಯ ಸಿಬ್ಬಂದಿ ಮೇಲೆ ಮರಣಾಂತಿಕ ದಾಳಿ ನಡೆಸಿದ್ದಾನೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಭವಿತ್‌ನ್ನು ತಕ್ಷಣವೇ ಸ್ನೇಹಿತರು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ತುರ್ತು ನಿಗಾ ಘಟಕದಲ್ಲಿ ದಾಖಲಿಸಿದ್ದಾರೆ. ಆತನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
TV-Channel-Staffer-Stabbed-with-Beer-Bottle-After-Film-Launch-Party-in-Bengaluru-Accused-Arrestedವಿಜಯ್ ಹಾಗೂ ಭವಿತ್ ಮಧ್ಯೆ ಏನು ಕಾರಣಕ್ಕೆ ಗಲಾಟೆ ನಡೆದಿದೆ ಎಂಬ ಬಗ್ಗೆ ಪೊಲೀಸ್ ತನಿಖೆ ಮುಂದುವರೆದಿದ್ದು, ಸುಬ್ರಮಣ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಜಯ್‌ನನ್ನು ಬಂಧಿಸಲಾಗಿದೆ.
ಈ ಘಟನೆ ಗುರುಪೂರ್ಣಿಮೆಯಂದು ನಡೆದ ಆರು ಸಿನಿಮಾಗಳ ಲಾಂಚ್ ಕಾರ್ಯಕ್ರಮದ ಬಳಿಕ ರಾತ್ರಿ ಸುಮಾರು 11:30ರ ವೇಳೆಗೆ ನಡೆದಿದ್ದು, ಸ್ಥಳದಲ್ಲಿ 20ಕ್ಕೂ ಹೆಚ್ಚು ನಟ-ನಟಿಯರು, ನಿರ್ಮಾಪಕರು ಉಪಸ್ಥಿತರಿದ್ದರು.