ಬೆಳಗಾವಿ:
ಸಾಂಬ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಿಹಾಳ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 20 ಟನ್ ಗೋಚರ್ಮ ವಶಪಡಿಸಿಕೊಳ್ಳಲಾಗಿದ್ದು ಅಕ್ರಮ ಸಾಗಾಟ ಮಾಡುವವರ ಮೇಲೆ ಪ್ರಕರಣ ದಾಖಲಿಸಿಕೊಂಡು ಕಠಿಣ ಶಿಕ್ಷೆಗೆ ಒಳಪಡಿಸಲು ಪೊಲೀಸರಿಗೆ ಸಚಿವ ಪ್ರಭು ಚವ್ಹಾಣ್ ನಿರ್ದೇಶನ ನೀಡಿದ್ದಾರೆ.
ಗೋಹತ್ಯೆ ಕಾಯ್ದೆ ಜಾರಿಯ ನಂತರ ಅಲ್ಲಲ್ಲಿ ಅಕ್ರಮವಾಗಿ ಚರ್ಮದ ಸಾಗಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಕುರಿತಾಗಿ ಪೊಲೀಸ್ ಇಲಾಖೆ ಹೆಚ್ಚಿನ ನಿಗಾವಹಿಸಿ ಪಶುಸಂಗೋಪನೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು
ಅಕ್ರಮ ಚರ್ಮ ಸಾಗಾಟದಲ್ಲಿ ತೊಡಗಿದ್ದವರ ಮೂಲ ಪತ್ತೆ ಹಚ್ಚಿ ಇದರಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಬೇಕು ಅಂದಾಗ ಮಾತ್ರ ಅಕ್ರಮ ದಂಧೆಯಲ್ಲಿ ತೊಡಗಿದವರಿಗೆ ಬಿಸಿ ಮುಟ್ಟುತ್ತದೆ ಎಂದು ಪೋಲಿಸ್ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.
ಗಡಿಯಲ್ಲಿ ಚೆಕ್ಪೋಸ್ಟ್ ನಿರ್ಮಿಸಲು ಸೂಚನೆ
ಅಕ್ರಮವಾಗಿ ಗೋವು ಹಾಗೂ ಚರ್ಮ ಸಾಗಾಟದ ಮೇಲೆ ಹೆಚ್ಚಿನ ನಿಗಾವಹಿಸಲು ಗಡಿ ಭಾಗದಲ್ಲಿ ಪೊಲೀಸ್ ಇಲಾಖೆ ಹೆಚ್ಚಿನ ನಿಗಾವಹಿಸಬೇಕು ಹಾಗೂ ಪ್ರಾಣಿ ಕಲ್ಯಾಣ ಸಹಾಯವಾಣಿ ಮೂಲಕ ಬರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಬೇಕು ಎಂದು ಸಚಿವರು ಹೇಳಿದರು.
ಎಸ್.ಪಿ ಗಳ ಸಭೆ
ಗೃಹ ಇಲಾಖೆಯ ಸಚಿವರಾದ ಅರಗ ಜ್ಞಾನೇಂದ್ರ ಅವರೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಲಾಗಿದ್ದು ಶೀಘ್ರದಲ್ಲೇ ರಾಜ್ಯದ ಎಲ್ಲ ಎಸ್.ಪಿಗಳ ಸಭೆ ಕರೆದು ರಾಜ್ಯದಲ್ಲಿ ಅಕ್ರಮ ಗೋವುಗಳ ಸಾಗಾಟಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು