ಬೆಳಗಾವಿ:
ಇಲ್ಲಿನ ದಂಡುಮಂಡಳಿ (ಕಂಟೊನ್ಮೆಂಟ್ ಬೋರ್ಡ್) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆನಂದ್ ಅವರು ತಮ್ಮ ಸರ್ಕಾರಿ ನಿವಾಸದಲ್ಲಿ ಶನಿವಾರ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವಿಸ್ ಸೇರಿದ್ದ ಅವರು ಒಂದೂವರೆ ವರ್ಷಗಳಿಂದ ಸಿಇಒ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಶನಿವಾರ ಬೆಳಿಗ್ಗೆ ಅವರು ಮನೆಯ ಬಾಗಿಲು ತೆರೆಯದ ಕಾರಣ ಕ್ಯಾಂಪ್ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಬಾಗಿಲು ಮುರಿದಾಗ ಆನಂದ ಅವರು ಶವವಾಗಿ ಪತ್ತೆಯಾದರು.
ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಅರೋಪದಡಿ ಎರಡು ವಾರದ ಹಿಂದೆ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ಮಾಡಿದ್ದರು.