Belagavi | robbery attempted at Jeweler shop after owner was it with revolver
ಬೆಳಗಾವಿ:
ಹಾಡಹಗಲೇ ರಿವಾಲ್ವರ್ ತೋರಿಸಿ ಚಿನ್ನಾಭರಣ ದರೋಡೆಗೆ ಯತ್ನಸಿರುವ ಘಟನೆ ಬೆಳಗಾವಿಯ ಶಾಹು ನಗರದ ಸಂತೋಷಿ ಜ್ಯುವೆಲ್ಲರಿ ಶಾಪ್ ನಲ್ಲಿ ನಡೆದಿದೆ.
ಚಿನ್ನದಂಗಡಿ ಮಾಲೀಕ ಪ್ರಶಾಂತ್ ಹೋಂಡ್ರಾ ಎಂದಿನಂತೆ ಇಂದು ಬೆಳಿಗ್ಗೆ ತಮ್ಮ ಅಂಗಡಿ ಬಾಗಿಲು ತೆರೆದಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು ಹಿಂದಿನಿಂದ ಬಂದು ಮಾಲೀಕನ ತಲೆಗೆ ಗನ್ ಹಿಡಿದು ಅಂಗಡಿ ಒಳಗೆ ನುಗ್ಗಿದ್ದಾರೆ. ಗನ್ ನಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ.
ಈ ವೇಳೆ ಮಾಲೀಕ ಪ್ರಶಾಂತ್ ಜೋರಾಗಿ ಕಿರುಚಿಕೊಂಡಿದ್ದಾರೆ. ಅವರ ಕೂಗಾಟ ಕೇಳಿ ಅಂಗಡಿ ಅಕ್ಕಪಕ್ಕದ ಜನರು ಬರುವುದನ್ನು ಗಮನಿಸಿದ ಕಳ್ಳರು ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ.

ಓರ್ವ ಕಳ್ಳ ಹೆಲ್ಮೆಟ್ ಧರಿಸಿ ಬಂದಿದ್ದರೆ ಇನ್ನೋರ್ವ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಗನ್ ಹಿಡಿದು ಬಂದು ಕೃತ್ಯವೆಸಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಚಿನ್ನದಂಗಡಿ ಮಾಲೀಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
