Belagavi's Maharashtra Ekikaran Samiti is an miscreants Organization: Karnataka CM Basavaraj Bommai
ಹುಬ್ಬಳ್ಳಿ:
ಎಂಇಎಸ್ ಕಿಡಿಗೇಡಿಗಳ ಸಂಘಟನೆಯಾಗಿದ್ದು, ಚುನಾವಣೆ ವೇಳೆ ಎಂಇಎಸ್‌ನವರು ಜನರ ಮನಸ್ಸನ್ನು ಕೆಡಿಸುವ ಗಿಮಿಕ್ ಮಾಡುತ್ತಾರೆ. ಬೆಳಗಾವಿ ಜನರಿಗೆ ಇದೆಲ್ಲಾ ಗೊತ್ತಿದೆ. ಇದಕ್ಕೆ ಜನರೇ ಉತ್ತರ ಕೊಡುತ್ತಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚುನಾವಣೆ ಸಂದರ್ಭದಲ್ಲಿ ಎಂಇಎಸ್ ಕಾರ್ಯಕರ್ತರು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಾರೆ, ಆದರೆ ಅವರಿಗೆ ತಕ್ಕ ಉತ್ತರ ನೀಡುವುದು ಹೇಗೆ ಎಂಬುದು ಬೆಳಗಾವಿ ಜನತೆಗೆ ಗೊತ್ತಿದೆ ಎಂದು ಹೇಳಿದರು.
ಬೆಳಗಾವಿ ಮತದಾರರು ಬಿಜೆಪಿಯನ್ನು ಆಯ್ಕೆ ಮಾಡುವ ಮೂಲಕ ಕನಿಷ್ಠ ಐದು ವರ್ಷಗಳ ಅವಧಿಗೆ ಎಂಇಎಸ್ ಅನ್ನು ಮನೆಗೆ ಕಳುಹಿಸುತ್ತಾರೆಂಬ ವಿಶ್ವಾಸ ನನಗಿದೆ.
