
Bommai at Belagavi Session
ಬೆಳಗಾವಿ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅನುಪಸ್ಥಿತಿಯಲ್ಲಿ ಬೆಳಗಾವಿ ನಗರದಲ್ಲಿ ಮಂಗಳವಾರ ತನ್ನ ಅಭ್ಯರ್ಥಿಗಳ ಪರ ಬಿಜೆಪಿ ರೋಡ್ ಶೋ ನಡೆಸಿತು.
ಬೆಳಗಾವಿ ಉತ್ತರ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ ನಡೆಯಿತು.
ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ, ಸಂಸದೆ ಮಂಗಳಾ ಅಂಗಡಿ, ಶಾಸಕ ಅನಿಲ ಬೆನಕೆ, ಬಿಜೆಪಿ ರಾಜ್ಯ ಸಂಚಾಲಕ ಎಂ.ಬಿ.ಜಿರಲಿ, ಮುರುಗೇಂದ್ರಗೌಡ ಪಾಟೀಲ, ಸದಾನಂದ ಗುಂಟೆಪ್ಪನವರ್ ಹಾಗೂ ಪಕ್ಷದ ಕಾರ್ಯಕರ್ತರು ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಿಂದ ರೋಡ್ ಶೋ ನಡೆಸಿದರು.
ಈ ರೋಡ್ ಶೋ ಕಾಕತೀವ್ಸ್, ಗಣಪತ್ ಗಲ್ಲಿ, ಮಾರುತಿ ಗಲ್ಲಿ ಮೂಲಕ ಸಾಗಿ ಹುತಾತ್ಮ ವೃತ್ತದಲ್ಲಿ ಪೂರ್ಣಗೊಂಡಿತು.
ಅದೇ ರೀತಿ ಬೆಳಗಾವಿ ದಕ್ಷಿಣದ ಬಿಜೆಪಿ ಅಭ್ಯರ್ಥಿ, ಶಾಸಕ ಅಭಯ ಪಾಟೀಲ ಅವರು ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಮತ್ತು ಇತರ ಮುಖಂಡರೊಂದಿಗೆ ಕ್ಷೇತ್ರದ ವಿವಿಧ ರಸ್ತೆಗಳಲ್ಲಿ ರೋಡ್ ಶೋ ನಡೆಸಿದರು.