ಬೆಳಗಾವಿ:
ನವ ಭಾರತಕ್ಕೆ ಮದರಸಾಗಳ ಅವಶ್ಯಕತೆ ಇಲ್ಲವಾಗಿದ್ದು, ಶೀಘ್ರದಲ್ಲೇ ರಾಜ್ಯದ ಎಲ್ಲಾ ಮದರಸಾಗಳನ್ನು ಮುಚ್ಚುವ ಕುರಿತು ಚಿಂತನೆ ಮಾಡಲಾಗುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಬೆಳಗಾವಿ (ದಕ್ಷಿಣ) ಶಾಸಕ ಅಭಯ ಪಾಟೀಲ ಅವರು ಇಲ್ಲಿನ ಶಿವಾಜಿ ಗಾರ್ಡನ್‌ನಲ್ಲಿ ‘ಶಿವಚರಿತ್ರೆ’ ಶೀರ್ಷಿಕೆಯ ವಸ್ತುಪ್ರದರ್ಶನವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಮದರಸಾ ಶಿಕ್ಷಣಕ್ಕೆ ಬ್ರೇಕ್ ಹಾಕಲು ಅಸ್ಸಾಂ ಸರ್ಕಾರ ಮುಂದಾಗಿದೆ ಎಂದು ಹೇಳಿದರು.ನಮ್ಮ ಸರ್ಕಾರವು ಈಗಾಗಲೇ ಅಸ್ಸಾಂನಲ್ಲಿ 600 ಮದರಸಾಗಳನ್ನು ಮುಚ್ಚಿದೆ. ಶೀಘ್ರದಲ್ಲೇ ಉಳಿದ ಮದರಸಾಗಳನ್ನೂ ಮುಚ್ಚುವ ಯೋಜನೆಯನ್ನು ಜಾರಿಗೆ ತರಲಿದೆ. ನಮಗೆ ಮದರಸಾಗಳ ಅಗತ್ಯವಿಲ್ಲ. ನಮಗೆ ಎಂಜಿನಿಯರ್‌ಗಳು ಮತ್ತು ವೈದ್ಯರು ಬೇಕು ಎಂದು ಹೀಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
Live : Participating in auspicious Shiva Charithe being held at Shivaji Maharaj Garden, Belgavi, Karnataka. https://t.co/FI146XGE2E
— Himanta Biswa Sarma (@himantabiswa) March 16, 2023
ಕಾಂಗ್ರೆಸಿಗರು ಬಾಬರಿ ಮಸೀದಿಯ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ, ರಾಮಮಂದಿರದ ಬಗ್ಗೆ ಮಾತನಾಡುವುದಿಲ್ಲ ಎಂದ ಅವರು, ಮೊಘಲರಂತೆಯೇ ಇರುವ ಕಾಂಗ್ರೆಸ್ಸಿಗರಿಗೆ ಜನರು ತಕ್ಕ ಪಾಠ ಕಲಿಸಬೇಕು, ಅವರನ್ನು ದೇಶದಿಂದ ಕಿತ್ತೊಗೆಯುವ ಅಗತ್ಯವಿದೆ ಎಂದರು.
ಅಸ್ಸಾಂ ಸೇರಿದಂತೆ ಇಡೀ ಉತ್ತರ ಭಾರತ ಎಂದೂ ಔರಂಗಜೇಬನ ಆಡಳಿತದ ಹಿಡಿತಕ್ಕೆ ಸಿಕ್ಕಿರಲಿಲ್ಲ. ಆದರೂ, ಕಮ್ಯುನಿಸ್ಟ್ ಸಾಹಿತಿಗಳು ಇಡೀ ಭಾರತ ಔರಂಗಜೇಬನ ಅಧೀನದಲ್ಲಿತ್ತು ಎಂದು ತಿರುಚಿದ ಇತಿಹಾಸ ಸೃಷ್ಟಿಸಿ ಹೋಗಿದ್ದಾರೆ. ಆದರೆ ಅವರು ಬಹಿರಂಗಪಡಿಸದ ವಿಷಯವೆಂದರೆ ಶಿವಾಜಿ ಮಹಾರಾಜರು ಔರಂಗಜೇಬ್‌ಗಿಂತ 10 ಪಟ್ಟು ಹೆಚ್ಚು ಸಮರ್ಥ ಯೋಧನಾಗಿದ್ದರು ಎಂದು ಅವರು ಹೇಳಿದರು.