ಬೆಂಗಳೂರು;- ಉದ್ಯಾನನಗರಿ ಬೆಂಗಳೂರಿನಲ್ಲಿ ಕಂಬಳದ ಕಂಪು ರಂಗೇರಿದೆ. ಅರಮನೆ ಮೈದಾನದಲ್ಲಿ ಇಂದು ಕಂಬಳದ ಭೂಮಿ ಪೂಜೆ ನಡೆದಿದ್ದು, ತುಳುಕೂಟಕ್ಕೆ 50ವರ್ಷವಾದ ಹಿನ್ನೆಲೆಯಲ್ಲಿ ಕಂಬಳ ಆಯೋಜನೆ ಮಾಡಲಾಗಿದೆ.
ಬೆಂಗಳೂರಿನ ಜನತೆಗಾಗಿ ಕಂಬಳ ನಡೆಯಲಿದೆ. ನವೆಂಬರ್ ತಿಂಗಳ 24,25,26ರಂದು ಕಂಬಳ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಕಂಬಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಇನ್ನೂ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಅಶ್ವತ್ಥ ನಾರಾಯಣ ಆಗಮಿಸಿದ್ದು, ತುಳುಕೂಟದ ಅಧ್ಯಕ್ಷ ಸುಂದರ್ ರಾಜ್ ರೈ ಭಾಗಿಯಾಗಿದ್ದಾರೆ. ಕಂಬಳದ ಭೂಮಿ ಪೂಜೆಯನ್ನು ಡಿಸಿಎಂ ಡಿಕೆಶಿ ನೆರವೇರಿಸಿದ್ದಾರೆ.
The post Bengaluru; ಉದ್ಯಾನನಗರಿಯಲ್ಲಿ ಕಂಬಳದ ಕಂಪು, ಅರಮನೆ ಮೈದಾನದಲ್ಲಿ ಭೂಮಿ ಪೂಜೆ appeared first on Ain Live News.