Home Uncategorized Bengaluru; ಪ್ರಿಯತಮೆ ನಗ್ನ ಫೋಟೋ ಅಪ್ಲೋಡ್ ಮಾಡ್ತಿದ್ದ ವಿಕೃತ ಕಾಮಿ ಅರೆಸ್ಟ್

Bengaluru; ಪ್ರಿಯತಮೆ ನಗ್ನ ಫೋಟೋ ಅಪ್ಲೋಡ್ ಮಾಡ್ತಿದ್ದ ವಿಕೃತ ಕಾಮಿ ಅರೆಸ್ಟ್

27
0

ಬೆಂಗಳೂರು;- ನಗರದಲ್ಲಿ ಪ್ರಿಯತಮೆ ಅಶ್ಲೀಲ ಫೋಟೋವನ್ನೇ ಸಾಮಾಜಿಕ ಜಾಲತಾಣದಲ್ಲಿ ಹಾಕ್ತಿದ್ದ ವಿಕೃತ ಕಾಯಿಯನ್ನು ಅರೆಸ್ಟ್ ಮಾಡಲಾಗಿದೆ.

26 ವರ್ಷದ ಸಂಜಯ್ ಕುಮಾರ್ ಬಂಧಿತ ಆರೋಪಿ. ಈತ ಹಾಗೂ ಇವನ ಗೆಳತಿ ಇಬ್ಬರೂ ತಮಿಳುನಾಡಿನ ವೆಲ್ಲೂರು ಮೂಲದವರು. ಇಬ್ಬರೂ ಬಿ ಪ್ಲಾನಿಂಗ್ ಕೊರ್ಸ್ ಮಾಡುತ್ತಿದ್ದರು. ಸಂಜಯ್‌ ಹಾಗೂ ಆತನ ಸ್ನೇಹಿತರು 12 ಜನ ಟೆಲಿಗ್ರಾಂ ಗ್ರೂಪ್ ಮಾಡಿಕೊಂಡಿದ್ದು, ಅದರಲ್ಲಿ ಮೊದಲಿಗೆ ಅರೆನಗ್ನ ಪೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.

ನಂತರ ಆ ಪೋಟೊಗಳ ಜತೆಗೆ, ಯುವತಿಯರ ಅರೆನಗ್ನ ಫೋಟೋಗಳನ್ನು ಸೃಷ್ಟಿಸುವುದಕ್ಕಾಗಿಯೇ ತಾನೇ ಪ್ರೋಗ್ರಾಂ ಬರೆದು bot ಹೆಸರಿನ ಆ್ಯಪ್‌ ಸಿದ್ಧಪಡಿಸಿದ್ದ. ಅದರಲ್ಲಿ ಅಕ್ಕಪಕ್ಕದ ಯುವತಿಯರ ಅಶ್ಲೀಲ ಸೃಷ್ಟಿಸಿ ಗ್ರೂಪ್‌ನಲ್ಲಿ ಹಂಚಿ ವಿಕೃತ ಆನಂದ ಪಡುತ್ತಿದ್ದ. ನಂತರ ಇವುಗಳನ್ನು ಇನ್‌ಸ್ಟಾದಲ್ಲೂ, ಟೆಲಿಗ್ರಾಂ ಗ್ರೂಪ್‌ಗಳಲ್ಲೂ ಹಂಚುತ್ತಿದ್ದ.

ಹೀಗೆ ಈತ ನೂರಾರು ಯುವತಿಯರ ಫೋಟೋಗಳನ್ನು ಮಾರ್ಪಡಿಸಿದ್ದು, ತನ್ನ ಗರ್ಲ್‌ಫ್ರೆಂಡ್‌ ಫೋಟೋವನ್ನು ಕೂಡ ಮಾರ್ಪಡಿಸಿ ಗ್ರೂಪ್‌ಗಳಲ್ಲಿ ಹಂಚಿ ವೈರಲ್‌ ಮಾಡಿದ್ದ. ಶೇರ್ ಆಗುತ್ತಿದ್ದಂತೆ ಪೋಟೊ ನೋಡಿ ಸಂಜಯ್ ಪ್ರೇಯಸಿ ಶಾಕ್ ಆಗಿದ್ದಳು. ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಳು. ಆಗ ಜತೆಗೆ ಈ ಸಂಜಯ್‌ ಕುಮಾರ್‌ ಕೂಡ ಬಂದಿದ್ದು, ಅಮಾಯಕನಂತೆ ವರ್ತಿಸಿದ್ದ.

ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ್ದ ಖಾಕಿಗೆ, ಪ್ರಿಯಕರನೇ ಇನ್‌ಸ್ಟಾದಲ್ಲಿ ಶೇರ್ ಮಾಡಿರುವುದು ತಿಳಿದುಬಂದಿದೆ. ಆರೋಪಿ ಸಂಜಯ್ ಕುಮಾರ್‌ನನ್ನು ಬಂಧಿಸಲಾಗಿದ್ದು, ಆತನಿಂದ 2 ಮೊಬೈಲ್, ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್, ಪೆನ್ ಡ್ರೈವ್ ವಶಪಡಿಸಿಕೊಳ್ಳಲಾಗಿದೆ.

The post Bengaluru; ಪ್ರಿಯತಮೆ ನಗ್ನ ಫೋಟೋ ಅಪ್ಲೋಡ್ ಮಾಡ್ತಿದ್ದ ವಿಕೃತ ಕಾಮಿ ಅರೆಸ್ಟ್ appeared first on Ain Live News.

LEAVE A REPLY

Please enter your comment!
Please enter your name here