ಬೆಂಗಳೂರು;- ರಾಜಧಾನಿ ಬೆಂಗಳೂರಿಗೆ ಕಾದಿದ್ಯಾ ಕರೆಂಟ್ ಶಾಕ್..? ಶೀಘ್ರದಲ್ಲೇ ಬೆಂಗಳೂರಿನಲ್ಲೂ ಕತ್ತಲು ಆವರಿಸುತ್ತಾ..? ಅನ್ ಆಫಿಶಿಯಲ್ ಆಗಿ ಲೋಡ್ ಶೆಡ್ಡಿಂಗ್ ಶುರು ಮಾಡುತ್ತಾ ಬೆಸ್ಕಾಂ..? ಎನ್ನುವ ಹಲವು ಪ್ರಶ್ನೆಗಳು ಇದೀಗ ಉದ್ಭವಿಸಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ಆತಂಕ ಶುರುವಾಗಿದೆ. ಬೇಸಿಗೆ ಮುನ್ನವೇ ರಾಜಧಾನಿಯಲ್ಲಿ ಕಗ್ಗತ್ತಿಲಿನ ಆತಂಕ ಎದುರಾಗಿದ್ದು, ಕಳೆದ ಕೆಲ ದಿನದಿಂದ ಬೆಂಗಳೂರು ನಗರದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ.
ವಿದ್ಯುತ್ ಸಮಸ್ಯೆಯಿಂದ ಬೆಂಗಳೂರು ಜನ ಹೈರಾಣಾಗಿದ್ದು, ಬೆಂಗಳೂರು ನಗರದಲ್ಲಿ ಪದೇ ಪದೇ ವಿದ್ಯುತ್ ಕಟ್ ಆಗಲು ಕಾರಣವೇನು..? ಬೆಸ್ಕಾಂ ವ್ಯಾಪ್ತಿಯಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಆಗ್ತಿಲ್ವಾ.. ಮಳೆಗಾಲದಲ್ಲೂ ಅಘೋಷಿತ ಲೋಡ್ ಶೆಡ್ಡಿಂಗ್ ಮಾಡ್ತಾ ಬೆಸ್ಕಾಂ…? ಎನ್ನುವ ಹಲವು ಪ್ರಶ್ನೆ ಉದ್ಭವಿಸಿದೆ.
ಬೆಂಗಳೂರು ನಗರದಲ್ಲಿ ವಿವಿಧ ಕಾಮಗಾರಿ ನೆಪವೊಡ್ಡಿ ಪೀಕ್ ಅವರ್ ನಲ್ಲೇ ಬೆಸ್ಕಾಂ ಕರೆಂಟ್ ಕಟ್ ಮಾಡ್ತಿದೆ. ಯಾವಾಗಲೂ ಬೇಸಿಗೆ ಕಾಲದಲ್ಲಿ ಜಲವಿದ್ಯುತ್ ಉತ್ಪಾದನೆ ಕಡಿಮೆಯಾದಾಗ ಲೋಡ್ ಶೆಡ್ಡಿಂಗ್ ಮಾಡುವ ವಾಡಿಕೆ ಇದೇ. ಆದ್ರೆ ಕಳೆದ ಕೆಲ ದಿನದಿಂದ ನಗರದಲ್ಲಿ ಮಳೆಗಾಲದಲ್ಲೂ ಲೋಡ್ ಶೆಡ್ಡಿಂಗ್ ಅನುಭವ ಎದುರಾಗಿದೆ.
The post Bengaluru; ಬೆಂಗಳೂರಿಗೆ ಕಾದಿದ್ಯಾ ಕರೆಂಟ್ ಶಾಕ್..? ಕತ್ತಲು ಆವರಿಸುತ್ತಾ ಸಿಲಿಕಾನ್ ಸಿಟಿ! appeared first on Ain Live News.
