Home ಬೆಂಗಳೂರು ನಗರ Bengaluru: 30 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿ ಬಂಧನ

Bengaluru: 30 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿ ಬಂಧನ

41
0
Bengaluru: Accused arrested with gold jewelery worth 30 lakhs
Bengaluru: Accused arrested with gold jewelery worth 30 lakhs

ಬೆಂಗಳೂರು:

ಮದುವೆಗೆಂದು ನಗರಕ್ಕೆ ಬಂದಿದ್ದ ಚೆನ್ನೈ ಮೂಲದ ಮಹಿಳೆಯಿಂದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ವಜ್ರ, ಚಿನ್ನ ಹಾಗೂ ಇತರ ಆಭರಣಗಳನ್ನು ದೋಚಿದ್ದ ಕ್ಯಾಬ್ ಚಾಲಕನೊಬ್ಬನನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ರಾಜಾನುಕುಂಟೆ ನಿವಾಸಿ ನಂದೀಶ್ (35) ಬಂಧಿತ ಚಾಲಕ. ಆರೋಪಿಯಿಂದ 30 ಲಕ್ಷ ರೂ. ಮೌಲ್ಯದ 485 ಗ್ರಾಂ ತೂಕದ ಚಿನ್ನಾಭರಣ ಹಾಗೂ 17.5 ಕ್ಯಾರೆಟ್ ತೂಕದ ವಜ್ರದ ಆಭರಣಗಳನ್ನು ಜಪ್ತಿ ಮಾಡಲಾಗಿದೆ.

ಚೆನ್ನೈ ಮೂಲದ ಉದ್ಯಮಿ ಉಮಾ ರೆಡ್ಡಿ ಎಂಬುವವರ ಚಿನ್ನ-ವಜ್ರಾಭರಣ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಮಾರೆಡ್ಡಿಯವರು ಇತ್ತೀಚೆಗೆ ಸಬಂಧಿಕರ ಮದುವೆ ಹಿನ್ನೆಲೆಯಲ್ಲಿ ನಗರಕ್ಕೆ ಬಂದಿದ್ದರು. ಯಲಹಂಕ ಉಪನಗರದ ಕ್ಲಾರಿಯೆಟ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಹೋಟೆಲ್ ನಿಂದ ಮದುವಗೆ ಓಡಾಡಲು ನಂದೀಶ್’ನ ಕಾರನ್ನು ಬಾಡಿಗೆಗೆ ಪಡೆದಿದ್ದರು. ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಹೋಟೆಲ್ ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಲು ಲಗೇಜ್ ಪ್ಯಾಕ್ ಮಾಡಿ ಸೂಟ್ ಕೇಸ್ ತಂದು ಕಾರಿಗೆ ಇರಿಸಿದ್ದರು. ಬಳಿಕ ಹೋಟೆಲ್ ರೂಮ್ ಕೀ ವಾಪಾಸ್ ನೀಡಲು ಹೋಟೆಲ್ ಒಳಗೆ ತೆರಳಿದ್ದರು. ಈ ವೇಳೆ ಆರೋಪಿ ಸೂಟ್ ಕೇಸ್ ತೆರೆದು ಚಿನ್ನ-ವಜ್ರಾಭರಣಗಳನ್ನು ಕಳ್ಳತನ ಮಾಡಿದ್ದ. ಚೆನ್ನೈಗೆ ಮರಳಿದ ಬಳಿಕ ಮಹಿಳೆಗೆ ಆಭರಣಗಳು ನಾಪತ್ತೆಯಾಗಿರುವುದು ತಿಳಿದುಬಂದಿದೆ.

ಕೂಡಲೇ ನಗರದ ತಮ್ಮ ಸಂಬಂಧಿಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಕ್ಯಾಬ್ ಚಾಲಕನಿಗೆ ಪದೇ ಪದೇ ಕರೆ ಮಾಡಿದರೂ ಸ್ಪಂದಿಸಿಲ್ಲ. ಈ ವೇಳೆ ಅನುಮಾನ ನಿಜವಾಗಿದೆ. ಬಳಿಕ ಕಳ್ಳತನ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

LEAVE A REPLY

Please enter your comment!
Please enter your name here