Home ಅಪರಾಧ Bengaluru: Bomb threat in public places: E-mail sent to Chief Minister, Deputy...

Bengaluru: Bomb threat in public places: E-mail sent to Chief Minister, Deputy Chief Minister and Home Minister | ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ: ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಇ-ಮೇಲ್ ರವಾನೆ

25
0
Vidhana Soudha

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಸಂಭವಿಸಿದ ಮರುದಿನ ‘ಬಸ್ಸು, ರೈಲು, ದೇವಸ್ಥಾನ, ಹೋಟೆಲ್‌ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಇ-ಮೇಲ್ ಮೂಲಕ ಬೆದರಿಕೆ ಕರೆ ರವಾನಿಸಿರುವ ಘಟನೆ ವರದಿಯಾಗಿದೆ.

ಶನಿವಾರ ಮಧ್ಯಾಹ್ನ 2:48ಕ್ಕೆ ಶಾಹಿದ್ ಖಾನ್ ಎಂಬ ಹೆಸರಿನಲ್ಲಿ ಸರ್ಕಾರಕ್ಕೇ ಬಾಂಬ್ ಬ್ಲ್ಯಾಸ್ಟ್ ಇ-ಮೇಲ್ ಬಂದಿದ್ದು ಖುದ್ದು ಪೊಲೀಸರೇ ದಾಖಲಿಸಿರೋ ಎಫ್ಐಆರ್ ನಲ್ಲಿದೆ ಸ್ಫೋಟಕ ಅಂಶ ಬಯಲಾಗಿದೆ.

Bengaluru Bomb threat in public places E mail sent to Chief Minister Deputy Chief Minister and Home Minister

ನಿನ್ನೆ ಮಾರ್ಚ್ 4 ರಂದು ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಯುತ್ತಿದ್ದು ಈ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ. ಎಲ್ಲರಿಗೂ ಮೇಲ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿರೋ ದುಷ್ಕರ್ಮಿ ಸದ್ಯ ಸೈಬರ್ ಪೊಲೀಸರಿಂದ ಮುಂದುವರೆದ ತನಿಖೆ ನಡೆಯುತ್ತಿದೆ.

ಬಸ್ಸು, ರೈಲು, ದೇವಸ್ಥಾನ, ಹೋಟೆಲ್ ಗಳಲ್ಲಿ ಬಾಂಬ್ ಇಡ್ತೀವಿ ಅಂತಾ ಬೆದರಿಕೆ ಹಾಕಿದ್ದಾರೆ. ಹಾಗೆ ಸಾರ್ವಜನಿಕ ಸ್ಥಳಗಳು ಹಾಗೂ ಅಂಬಾರಿ ಉತ್ಸವ ಬಸ್ ಗಳಲ್ಲಿ ಬಾಂಬ್ ಇಡ್ತೀವಿ ಅಂತಾ ಬೆದರಿಕೆ ಒಡಿದ್ದಾರೆ.

LEAVE A REPLY

Please enter your comment!
Please enter your name here