ಬೆಂಗಳೂರು;- ರಾಮಮೂರ್ತಿನಗರದ ಮುಕುಟಮ್ಮ ದೇವಸ್ಥಾನ ಬಳಿ ಹಳೆ ದ್ವೇಷಕ್ಕೆ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ಜರುಗಿದೆ.
ಮದನ್ ಮೃತ ಯುವಕ ಎಂದು ಹೇಳಲಾಗಿದೆ. ರಾಮಮೂರ್ತಿನಗರದ ಮುಖ್ಯ ರಸ್ತೆಯಲ್ಲಿರುವ ಕಟ್ಟಿಂಗ್ ಶಾಫ್‌ನಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಹಲವು ದಿನಗಳ ಹಿಂದೆ ಹೃತ್ವಿಕ್ ಎಂಬಾತನ ಮೇಲೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಮದನ್ ಹಲ್ಲೆ ಮಾಡಿದ್ದ. ಚೆನೈನಲ್ಲಿದ್ದ ವಾಸವಾಗಿದ್ದ ಮದನ್ ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ. ಮದನ್ ಬರುವಿಕೆಗಾಗಿ ಕಾದು ಕುಳಿತಿದ್ದ ಹಂತಕರು, ಲಾಂಗ್ ಹಿಡಿದು ದಾಳಿ ನಡೆಸಿ ಕೈ ಕತ್ತರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದರಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ
The post Bengaluru Breaking; ಹಳೆ ದ್ವೇಷಕ್ಕೆ ಯುವಕನ ಭೀಕರ ಕೊಲೆ appeared first on Ain Live News.