Home ಅಪರಾಧ Bengaluru: Couple having naked sex in car: what happened next? couple escaped...

Bengaluru: Couple having naked sex in car: what happened next? couple escaped by running the car over the police| ಕಾರಿನಲ್ಲೇ ಬೆತ್ತಲಾಗಿ ಜೋಡಿಯ ಕಾಮದಾಟ: ಆಮೇಲೇನಾಯ್ತು? ಪೊಲೀಸ್​ ಮೇಲೆಯೆ ಕಾರು ಚಲಾಯಿಸಿಕೊಂಡು ಜೋಡಿ ಪರಾರಿ

218
0
Wife Swapping

ಬೆಂಗಳೂರು:

ಬೆಂಗಳೂರಿನ ಉದ್ಯಾನವೊಂದರ ಬಳಿ ಜೋಡಿಯೊಂದು ಮಟ ಮಟ ಮಧ್ಯಾಹ್ನವೇ ಕಾರಿನಲ್ಲೇ ಬೆತ್ತಲಾಗಿ ಕಾಮತೃಷೆ ತೀರಿಸಿಕೊಳ್ಳಲು ಮುಂದಾದ ಘಟನೆ ಜರುಗಿದೆ.

ಇದೇ ವೇಳೆ, ದೃಶ್ಯ ಕಂಡು ಬುದ್ಧಿಹೇಳಲು ಬಳಿ ತೆರಳಿದ ಪೊಲೀಸ್​ ಮೇಲೆಯೆ ಕಾರು ಚಲಾಯಿಸಿಕೊಂಡು ಜೋಡಿ ಪರಾರಿಯಾಗಿದೆ. ಗಾಯಗೊಂಡ ಸಬ್​ ಇನ್​​ಸ್ಪೆಕ್ಟರ್​ ಮಹೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಜ್ಞಾನಭಾರತಿ ಪೊಲೀಸ್ ಠಾಣೆ (Jnanabharathi Police Station) ವ್ಯಾಪ್ತಿಯ ಉದ್ಯಾನವನವೊಂದರ ಬಳಿ ಕಿಯೋ ಸೆಲಾಟೋಸ್ ಕಾರಿನಲ್ಲಿ ಬಂದಿದ್ದ ಜೋಡಿಯೊಂದು ಅಲ್ಲೇ ಬಟ್ಟೆಬಿಚ್ಚಿ ಕಾಮಕೇಳಿ ಆರಂಭಿಸಿದೆ. ಪಾರ್ಕ್​ನಲ್ಲಿ ಅನೇಕ ಮಂದಿ ಇದ್ದರೂ, ಅವರಿಗೆಲ್ಲ ತಾವು ಕಾಣಿಸುತ್ತಿದ್ದರೂ ಅದನ್ನು ಲೆಕ್ಕಿಸದೆ ಜೋಡಿ ಸರಸದಲ್ಲಿ ತಲ್ಲೀನವಾಗಿದೆ. ಇದೇ ವೇಳೆ ಅಲ್ಲಿ ಕರ್ತವ್ಯ ನಿರತರಾಗಿದ್ದ ಸಬ್ ಇನ್ಸ್​​ಪೆಕ್ಟರ್ ಮಹೇಶ್ ಆ ಜೋಡಿಯನ್ನು ಗಮನಿಸಿದ್ದಾರೆ.

ಜೋಡಿಗೆ ಬುದ್ಧಿ ಹೇಳಬೇಕು ಎಂದುಕೊಂಡ ಸಬ್ ಇನ್ಸ್​​ಪೆಕ್ಟರ್ ಮಹೇಶ್ ಕಾರಿನ ಬಳಿ ತೆರಳಿದ್ದಾರೆ. ಕಾರಿನ ಬಳಿ ಹೋಗಿ ನಂಬರ್ ಪ್ಲೇಟ್ ಪರಿಶೀಲನೆ ನಡೆಸಿದ್ದಾರೆ. ಅಷ್ಟರಲ್ಲಿ ಎಚ್ಚೆತ್ತುಕೊಂಡ ಯುವಕ ಏಕಾಏಕಿ ಕಾರು ಚಲಾಯಿಸಿದ್ದಾನೆ. ದಿಢೀರ್ ಕಾರು ಚಲಿಸಲು ಆರಂಭಿಸಿದ ಕಾರಣ ಸಬ್ ಇನ್ಸ್​​ಪೆಕ್ಟರ್ ಮಹೇಶ್ ಬಾನೆಟ್ ಮೇಲೆ ಬಿದ್ದಿದ್ದಾರೆ. ಅವರು ಕಾರಿನ ಬಾನೆಟ್ ಹಿಡಿದುಕೊಂಡು ಒದ್ದಾಡುತ್ತಿದ್ದರೂ ಲೆಕ್ಕಿಸದ ಯುವಕ ಕಾರು ಚಲಾಯಿಸಿದ್ದಾನೆ. ಏಕಾಏಕಿ ಕಾರನ್ನು ರಿವರ್ಸ್ ತೆಗೆದು ಮತ್ತೆ ಮುಂದಕ್ಕೆ ಚಲಾಯಿಸಿದ್ದಾನೆ. ಪರಿಣಾಮವಾಗಿ ಕೆಳಬಿದ್ದ ಸಬ್ ಇನ್ಸ್​ಪೆಕ್ಟರ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸದ್ಯ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಹೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here