Home ಅಪರಾಧ Bengaluru: Drunk driving: 8 bikes damaged| ಮದ್ಯದ ನಶೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾವಣೆ: 8...

Bengaluru: Drunk driving: 8 bikes damaged| ಮದ್ಯದ ನಶೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾವಣೆ: 8 ಬೈಕ್‌ʼಗಳಿಗೆ ಹಾನಿ

29
0
Bengaluru: Drunk driving: 8 bikes damaged

ಬೆಂಗಳೂರು: ಕಂಠಪೂರ್ತಿ ಕುಡಿದು ಮದ್ಯದ ನಶೆಯಲ್ಲಿ ಕಾರು ಚಲಾಯಿಸಿ ಎಂಟು ಬೈಕ್‌ಗಳು ಸಂಪೂರ್ಣ ಜಖಂಗೊಂಡಿರುವ ಘಟನೆ ಉಲ್ಲಾಳು ಬಳಿಯ ಕೆಎಲ್‌ಇ ಲಾ ಕಾಲೇಜು ಬಳಿ ನಡೆದಿದೆ.

ಭರತ್ ಎಂಬ ಯುವಕ ತನ್ನ ಕಾರಿನಲ್ಲಿ ನಾಲ್ವರು ಸ್ನೇಹಿತರನ್ನ ಕರೆದುಕೊಂಡು ಹೋಗಿ ಪಾರ್ಟಿ ಮಾಡಿದ್ದಾನೆ. ಸ್ನೇಹಿತ ಗುರುದೀಪ್‌ಗೆ ಕಾರು ಚಲಾಯಿಸಲು ಕೊಟ್ಟು ಡ್ರೈವ್‌ ಹೋಗಿದ್ದಾರೆ. ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಇರಲಿ ಎಂದು ಒಡಾಡಲು ಕಾರು ಕೊಡಿಸಿದ್ದರು. ಪಾಕೆಟ್ ಮನಿ ಅದೂ ಇದು ಅಂತಾ ಉಳಿಸಿದ್ದರಲ್ಲಿ ಕಂಠಪೂರ್ತಿ ಕುಡಿದು ಕಾರಿನಲ್ಲಿ ಮೋಜಿನ ರೈಡ್ ಹೋಗಿ ಈ ಅಪಘಾತವೆಸಗಿದ್ದಾರೆ.

Bengaluru: Drunk driving: 8 bikes damaged
Bengaluru: Drunk driving: 8 bikes damaged

ಮದ್ಯದ ನಶೆಯಲ್ಲಿ ಕೆಎಲ್‌ಇ ಲಾ ಕಾಲೇಜಿನ ಬಳಿ ವೇಗವಾಗಿ ಕಾರು ಚಲಾಯಿಸಿಕೊಂಡು ಗುರುದೀಪ್ ಬಂದಿದ್ದಾನೆ. ಬಳಿಕ ಕಾರು ನಿಯಂತ್ರಣ ತಪ್ಪಿ ಬೇಕರಿ ಬಳಿ ನಿಂತಿದ್ದ ಬೈಕ್‌ಗಳ ಮೇಲೆ ಹರಿದಿದೆ. ಕಾರು ಗುದ್ದಿದ ರಭಸಕ್ಕೆ ಎಂಟು ಬೈಕುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ

LEAVE A REPLY

Please enter your comment!
Please enter your name here