Home ಅಪರಾಧ Bengaluru: man was hit in the leg by a pistol misfire in...

Bengaluru: man was hit in the leg by a pistol misfire in Begur police station | ಬೇಗೂರು ಪೊಲೀಸ್ ಠಾಣೆಯಲ್ಲಿ ಪಿಸ್ತೂಲ್ ನಿಂದ ಮಿಸ್ ಫೈಯರ್ ಆಗಿ ವ್ಯಕ್ತಿಯ ಕಾಲಿಗೆ ತಗುಲಿದ ಗುಂಡು

19
0
Bengaluru Bangalore Police

ಬೆಂಗಳೂರು: ಬೇಗೂರು ಪೊಲೀಸ್ ಠಾಣೆಯಲ್ಲಿ ಪಿಸ್ತೂಲ್ ನಿಂದ ಮಿಸ್ ಫೈಯರ್ ಆಗಿರುವ ಘಟನೆ  ನಡೆದಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಆದೇಶದಂತೆ ಠೇವಣಿ ಇಡಲು ಬಂದಿದ್ದ ಕಂಟ್ರಿಮೇಡ್ ಪಿಸ್ತೂಲ್ ಪರಿಶೀಲಿಸುವಾಗ, ಠಾಣಾ ಸಿಬ್ಬಂದಿಯಿಂದ ಮಿಸ್ ಫೈರ್ ಆಗಿ ರೈಟರ್ ಗೆ ಗುಂಡೇಟು ಬಿದ್ದು ವರದಿಯಾಗಿದೆ.

ಪೊಲೀಸ್ ಆಯುಕ್ತರ ಸೂಚನೆಯಂತೆ ಮುಕುಂದರೆಡ್ಡಿ ಎಂಬುವವರು ತಮ್ಮ ಬಳಿಯಿದ್ದ ಕಂಟ್ರಿಮೇಡ್ ಪಿಸ್ತೂಲ್ ಅನ್ನು ಠಾಣೆಯಲ್ಲಿ ಠೇವಣಿ ಇಡಲು ಬಂದಿದ್ದರು. ಕಾನ್ಸ್‍ಟೇಬಲ್ ವೆಂಕಣ್ಣ ಅವರು ಪರಿಶೀಲಿಸುತ್ತಿದ್ದರು.

ಈ ವೇಳೆ, ಟ್ರಿಗರ್ ಒತ್ತಿದ ತಕ್ಷಣ ಪಿಸ್ತೂಲ್ ಒಳ ಹೊಕ್ಕಿದ್ದ ಗುಂಡು ಎದುರುಗಡೆ ಕುಳಿತ್ತಿದ್ದ ಠಾಣಾ ರೈಟರ್ ಅಂಬುದಾಸ್ ಅವರ ಎಡಕಾಲಿಗೆ ಮಿಸ್ ಫೈರ್ ಆಗಿದೆ. ಘಟನೆ ಸಂಬಂಧ ಗಾಯಾಳುವನ್ನು ಅಪೊಲೊ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ.

ಬುಲೆಟ್ ಮ್ಯಾಗಜೀನ್‍ನಲ್ಲಿದ್ದ ಒಂದು ಗುಂಡು ಪಿಸ್ತೂಲ್‍ನಲ್ಲಿ ಲಾಕ್ ಆಗಿರುವ ಸಾಧ್ಯತೆ ಬಗ್ಗೆ ಶಂಕಿಸಲಾಗಿದೆ. ಸ್ಥಳಕ್ಕೆ ವಿಧಿವಿಜ್ಞಾನ ತಂಡ ಆಗಮಿಸಿ ಪರಿಶೀಲಿಸುತ್ತಿದೆ. ಘಟನೆಗೆ ಕಾರಣರಾದ ಕಾನ್ಸ್‍ಟೇಬಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here