Home ಬೆಂಗಳೂರು ನಗರ Namma Metro: ಒಂದೇ ಟಿಕೆಟ್​ನಲ್ಲಿ ಗುಂಪು ಪ್ರಯಾಣಕ್ಕೆ ಅವಕಾಶ

Namma Metro: ಒಂದೇ ಟಿಕೆಟ್​ನಲ್ಲಿ ಗುಂಪು ಪ್ರಯಾಣಕ್ಕೆ ಅವಕಾಶ

49
0
Namma Metro
ಫೈಲ್ ಚಿತ್ರ

ಬೆಂಗಳೂರು:

ಬೆಂಗಳೂರು ನಮ್ಮ ಮೆಟ್ರೋ ನಿಗಮ ಒಂದೇ ಟಿಕೆಟ್​ನಲ್ಲಿ ಒಂದಕ್ಕಿಂತ ಹೆಚ್ಚು ಹಾಗೂ ಗರಿಷ್ಠ ಆರು ಮಂದಿ ಪ್ರಯಾಣಿಸುವ ಅವಕಾಶವನ್ನು ಶೀಘ್ರದಲ್ಲೇ ಕಲ್ಪಿಸುತ್ತಿದೆ. ಇದು ಗುಂಪಾಗಿ ಪ್ರಯಾಣಿಸುವ, ವಿಶೇಷವಾಗಿ ಕುಟುಂಬವಾಗಿ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.

ಒಂದು ಟಿಕೆಟ್ ಮೂಲಕ ಗುಂಪು ಪ್ರಯಾಣದ ಅವಕಾಶವು ಜನವರಿ 15ರ ಒಳಗಾಗಿ ಆರಂಭಿಸಲಾಗುವುದು. ಈ ಕ್ರಮವು ಅನೇಕರ ಸಮಯವನ್ನು ಉಳಿಸಲಿದೆ. ಪ್ರಸ್ತುತ ಇದರ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಈ ಪರೀಕ್ಷೆ ಇನ್ನೂ ಕೆಲವು ವಾರಗಳ ಕಾಲ ಮುಂದುವರಿಯಲಿದೆ ಎಂದು ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮತ್ತು ಡಿಪೋಗಳ ಮುಖ್ಯ ಇಂಜಿನಿಯರ್ ಬಿ.ಎಲ್ ಯಶವಂತ ಚವಾಣ್ ಮಾಹಿತಿ ಹಂಚಿಕೊಂಡರು.

ನವೆಂಬರ್ 1 ರಂದು ಪ್ರಾರಂಭಿಸಲಾದ ಕ್ಯೂಆರ್ ಟಿಕೆಟ್ ವ್ಯವಸ್ಥೆಯು ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಈವರೆಗೆ ಯಾವುದೇ ದೋಷಗಳು ಅಥವಾ ದೂರುಗಳು ಬಂದಿಲ್ಲ. ಆರಂಭದ ದಿನ 1,800 ಪ್ರಯಾಣಿಕರು ಕ್ಯೂಆರ್ ಟಿಕೆಟ್ ಬಳಸಿದ್ದು, ನವೆಂಬರ್ 20 ರಂದು 12,787 ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 1,35,564 ಕ್ಯೂಆರ್ ಟಿಕೆಟ್‌ಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here