Home ಬೆಂಗಳೂರು ನಗರ Bengaluru | ಕಸದ ರಾಶಿಯಲ್ಲಿ ನವಜಾತನ ಮೃತದೇಹ ಪತ್ತೆ: ಆರೋಪಿ ವಶಕ್ಕೆ

Bengaluru | ಕಸದ ರಾಶಿಯಲ್ಲಿ ನವಜಾತನ ಮೃತದೇಹ ಪತ್ತೆ: ಆರೋಪಿ ವಶಕ್ಕೆ

6
0
Bengaluru | Newborn's body found in garbage pile: Accused arrested

ಬೆಂಗಳೂರು : ಕಸದ ರಾಶಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿರುವ ಘಟನೆ ಇಲ್ಲಿನ ಯಲಹಂಕ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಈ ಪ್ರಕರಣ ಸಂಬಂಧ ಆರೋಪಿ ಭರತ್ ಎಂಬುವನನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ. ಆರೋಪಿಯು ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಸಿ ಆಕೆ ಮಗುವಿಗೆ ಜನ್ಮ ನೀಡಿದ ಬಳಿಕ ಶಿಶು ಮೃತಪಟ್ಟಿದೆ. ಅದನ್ನು ಆತ ಕಸದ ರಾಶಿಯಲ್ಲಿ ಎಸೆದಿದ್ದಾನೆ ಎನ್ನಲಾಗಿದೆ.

ಕಸದ ರಾಶಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗುತ್ತಿದ್ದಂತೆ ಯಲಹಂಕ ಠಾಣೆಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ಆಧರಿಸಿ ತನಿಖೆ ನಡೆಸಿದಾಗ ವ್ಯಕ್ತಿಯೊಬ್ಬ ಕಸವನ್ನು ಎಸೆಯುವುದು ಕಂಡು ಬಂದಿತ್ತು. ಆತನನ್ನು ಪತ್ತೆ ಹಚ್ಚಿ ಪ್ರಶ್ನಿಸಿದಾಗ ಪಕ್ಕದ ಮನೆಯ ಹುಡುಗಿ ಕಸ ಎಸೆಯುವಂತೆ ಹೇಳಿದ್ದಾಗಿ ತಿಳಿಸಿದ್ದಾನೆ. ನಂತರ ಅಪ್ರಾಪ್ತೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ನಿಜಾಂಶ ಹೊರಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here