ಬೆಂಗಳೂರು:
ವಿದೇಶಿ ಪ್ರಜೆಗಳು ಮತ್ತು ಇತರ ರಾಜ್ಯದವರು ಸೇರಿದಂತೆ 14 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದ್ದು, 7.83 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಪೊಲೀಸ್ ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ನಿಗ್ರಹ ದಳ ತಿಳಿಸಿದೆ.
ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ವರ್ತೂರು, ಬನಶಂಕರಿ, ವಿದ್ಯಾರಣ್ಯಪುರ, ಕಾಟನ್‌ಪೇಟೆ ಮತ್ತು ಕಾಡುಗೋಡಿಯಲ್ಲಿ ಕಳೆದ ಒಂದು ವಾರದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದವು.
ಈ ಪ್ರಕರಣಗಳಲ್ಲಿ ಒಟ್ಟು 14 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದ್ದು, ಇದರಲ್ಲಿ ಮೂವರು ವಿದೇಶಿ ಪ್ರಜೆಗಳು, ಒರಿಸ್ಸಾ ಮತ್ತು ಕೇರಳದ ತಲಾ ನಾಲ್ವರು ಮತ್ತು ಬೆಂಗಳೂರಿನ ಮೂವರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರಿಂದ ಅಂದಾಜು 7,83,70,000 ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 182 ಕೆಜಿ ಗಾಂಜಾ, 1.450 ಕೆಜಿ ಹ್ಯಾಶಿಶ್ ಆಯಿಲ್, 16.2 ಗ್ರಾಂ ಎಂಡಿಎಂಎ, 135 ಎಕ್ಸ್‌ಟಸಿ ಮಾತ್ರೆಗಳು, 1 ಕೆಜಿ ಮೆಫೆಡ್ರಾನ್ ವೈಟ್ ಪೌಡರ್, 1 ಕೆಜಿ ಮೆಫೆಡ್ರಾನ್ ವೈಟ್ ಪೌಡರ್, 880 ಗ್ರಾಂ ಕೊಕೇನ್, 230 ಗ್ರಾಂ ಎಂಡಿಎಂಎ ಎಕ್ಸ್ಟಸಿ ಪೌಡರ್ ವಶಪಡಿಸಿಕೊಳ್ಳಲಾಗಿದೆ.
ಅಲ್ಲದೆ, ಎಂಟು ಮೊಬೈಲ್ ಫೋನ್‌ಗಳು, ಎರಡು ಕಾರುಗಳು, ಒಂದು ಸ್ಕೂಟರ್ ಮತ್ತು ತೂಕದ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.