Home ಅಪರಾಧ ಶಾಸಕ ಜಮೀರ್ ಅಹ್ಮದ್ ವಿರುದ್ಧ ಎಫ್​ಐಆರ್​​ ದಾಖಲು; ಭೂಕಬಳಿಕೆ ಆರೋಪ

ಶಾಸಕ ಜಮೀರ್ ಅಹ್ಮದ್ ವಿರುದ್ಧ ಎಫ್​ಐಆರ್​​ ದಾಖಲು; ಭೂಕಬಳಿಕೆ ಆರೋಪ

230
0
MLA Zameer AHmed Khan

ಬೆಂಗಳೂರು:

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹಾಗೂ ಕುಟುಂಬಸ್ಥರ ವಿರುದ್ಧ ಭೂಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ.

ಜಮೀರ್ ಹಾಗೂ ಕುಟುಂಬಸ್ಥರ ವಿರುದ್ಧ ಭೂಕಬಳಿಕೆ ಆರೋಪ ಎದುರಾಗಿದ್ದು, ಬೆಂಗಳೂರಿನ ಸಂಪಿಗೇಹಳ್ಳಿ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ನ್ಯಾಯಾಲಯದ ಆದೇಶದ ಮೇರೆಗೆ ಜಮೀರ್ ಅಹ್ಮದ್ ಹಾಗೂ ಸಹೋದರರ ವಿರುದ್ಧ ಎಫ್​ಐಆರ್ (FIR) ದಾಖಲು ಮಾಡಲಾಗಿದೆ.

ಜಮೀರ್ ಕುಟುಂಬದ ವಿರುದ್ಧ ಶಾಹೀತಾ ನಾಸೀನ್, ತಸ್ನೀಮ್ ಫಾತೀಮಾ ಎಂಬುವವರು ನಿವೇಶನ ಕಬಳಿಕೆ ಯತ್ನ ಆರೋಪದಡಿ ಕೋರ್ಟ್​ಗೆ ಖಾಸಗಿ ದೂರು ನೀಡಿದ್ದರು. ಈ ಸಂಬಂಧ ಕೋರ್ಟ್​ ಆದೇಶದಂತೆ ಜಮೀಲ್ ಅಹ್ಮದ್, ಜಮೀರ್ ಅಹ್ಮದ್, ಅತೀಕ್ ಕಾವರ್, ನ್ಯಾಷನಲ್ ಟ್ರಾವೆಲ್ಸ್, ಇತರರ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ.

Zameer-MLA-Fir

2015 ರಲ್ಲಿ ಶಾಹೀತಾ ನಾಸೀನ್, ತಸೀಮಾ ಫಾತೀಮಾ ಜಮೀರ್ ಕುಟುಂಬಸ್ಥರಿಂದ ಚೊಕ್ಕನಹಳ್ಳಿ ಬಡಾವಣೆಯಲ್ಲಿ ಸೈಟ್ ಖರೀದಿಸಿದ್ದಾರೆಂದು ಉಲ್ಲೇಖಿಸಲಾಗಿದೆ. ಚಾಮರಾಜಪೇಟೆ ಶಾಸಕ ಜಮೀರ್ ಸಹೋದರ ಹಾಗೂ ಕುಟುಂಬಸ್ಥರೇ ಅದನ್ನು ಮಾರಾಟ ಮಾಡಿದ್ದರು. 2018 ರಲ್ಲಿ ಜಮೀರ್ ಕುಟುಂಬಸ್ಥರಿಂದ ಮತ್ತೊಂದು ಸೈಟ್ ಖರೀದಿಸಿದ್ದಾಗಿ ಶಾಹೀತಾ ನಾಸೀನ್ ಉಲ್ಲೇಖಿಸಿದ್ದಾರೆ.

Also Read: Criminal case of forgery, trespassing and threatening filed against Cong MLA Zameer Ahmed Khan

ಜಮೀರ್ ಕುಟುಂಬದ ವಿರುದ್ಧ ಆರೋಪಿಸಿ ಸೈಟ್ ಮಾಲಿಕರು ಕಳೆದ ವರ್ಷ ಕೋರ್ಟ್ ಮೊರೆಹೋಗಿದ್ದರು. ಖಾಸಗಿ ದೂರು ವಿಚಾರಣೆ ನಡೆಸಿದ ಕೋರ್ಟ್, ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಜತೆಗೆ ಕಬಳಿಕೆ ಮಾಡಿರುವ ಸೈಟ್ ಸಂಬಂಧ ಯಥಾಸ್ಥಿತಿ ಕಾಪಾಡಲು ಆದೇಶ ನೀಡಿತ್ತು. ಕೋರ್ಟ್ ನಿಂದ ತಡೆಯಾಜ್ಞೆ ತಂದರೂ, ಸೈಟ್ ಬಿಟ್ಟು ಕೊಟ್ಟಿಲ್ಲ ಎಂದು ಆರೋಪಿಸಲಾಗಿದೆ.

ಪ್ರಸ್ತುತ ಸಂಪಿಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here