Home ಅಪರಾಧ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಸೇರಿ ಬಿಜೆಪಿ ನಾಯಕರಿಗೆ ಬೆಂಗಳೂರು ಪೊಲೀಸ್ ಸಮನ್ಸ್ಯಾ

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಸೇರಿ ಬಿಜೆಪಿ ನಾಯಕರಿಗೆ ಬೆಂಗಳೂರು ಪೊಲೀಸ್ ಸಮನ್ಸ್ಯಾ

52
0
Bengaluru police summons BJP President J.P. Nadda and other leaders

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಬಗ್ಗೆ ಅವಹೇಳನಕಾರಿಯಾದ ವಿಡಿಯೋವೊಂದು ಬಿಜೆಪಿಯ ಅಧಿಕೃತ ಖಾತೆಯಡಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ಐಟಿ ಸೆಲ್ ನ ಮುಖ್ಯಸ್ಥ ಅಮಿತ್ ಮಾಳವೀಯ ಹಾಗೂ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜೇಯಂದ್ರ ಅವರಿಗೆ ಕರ್ನಾಟಕ ಪೊಲೀಸ್ ಇಲಾಖೆ ವತಿಯಿಂದ ಸಮನ್ಸ್ ಜಾರಿಯಾಗಿದೆ.

ಇತ್ತೀಚೆಗೆ, ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಪ್ರಕಟವಾಗಿದ್ದ ಅನಿಮೇಟೆಡ್ ವಿಡಿಯೋ ಪೋಸ್ಟ್ ನಲ್ಲಿ, ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಮುಸ್ಲಿಂ ಸಮುದಾಯ ಹಾಗೂ ಎಸ್ಸಿ- ಎಸ್ಟಿ ಸಮುದಾಯಗಳನ್ನು ಲೇವಡಿ ಮಾಡಲಾಗಿತ್ತು. ಇದರ ವಿರುದ್ಧ ಕರ್ನಾಟಕ ಕಾಂಗ್ರೆಸ್ ದೂರು ಸಲ್ಲಿಸಿತ್ತು. ದೂರಿನನ್ವಯ ಕ್ರಮ ಕೈಗೊಂಡಿರುವ ಕರ್ನಾಟಕ ಪೊಲೀಸರು, ನಡ್ಡಾ, ಮಾಳವೀಯ ಹಾಗೂ ವಿಜಯೇಂದ್ರ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ.

ಬಿಜೆಪಿ ಪೋಸ್ಟ್ ನಲ್ಲಿ ಅನಿಮೇಟೆಡ್ ವಿಡಿಯೋವೊಂದನ್ನು ಮಾಡಲಾಗಿತ್ತು. ಅದರಲ್ಲಿ, ಮೋದಿಯವರ ಭಾಷಣದ ಒಂದು ಲೈನ್, “ನಿಮ್ಮ ಆಸ್ತಿಯಲ್ಲಿ ಒಂದು ಭಾಗವನ್ನು ಕಸಿದುಕೊಂಡು ಅದನ್ನು ಸಮಾಜದ ಕೆಲವರಿಗೆ ಹಂಚಲಾಗುತ್ತದೆ ಎಂಬ ಟ್ಯಾಗ್ ಲೈನ್ ಇತ್ತು. ಅನಿಮೇಟೆಡ್ ನಲ್ಲಿ ಒಂದು ಗೂಡು, ಅದರಲ್ಲಿ ಮೊಟ್ಟೆಯೊಡೆದು ಬಂದಿರುವ ಮೂರು ಹಕ್ಕಿಗಳು. ಆ ಮೂರು ಮೊಟ್ಟೆಗಳ ಮೇಲೆ ಎಸ್ಸಿ, ಎಸ್ಟಿ ಹಾಗೂ ಮುಸ್ಲಿಂ ಎಂದು ನಮೂದಿಸಲಾಗಿತ್ತು. ಆ ಹಕ್ಕಿಗಳ ಬಾಯಿಗೆ ರಾಹುಲ್ ಗಾಂಧಿ ನಿಧಿಯನ್ನು (ಫಂಡ್) ಸುರಿಯುತ್ತಿರುವಂತೆ ಅದನ್ನು ಚಿತ್ರಿಸಲಾಗಿತ್ತು.

ಇದೇ ಹಿನ್ನೆಲೆಯಲ್ಲಿ, ಕಾಂಗ್ರೆಸ್ ವತಿಯಿಂದ ದೂರು ದಾಖಲಿಸಲಾಗಿತ್ತು. ದೂರಿನಲ್ಲಿ ಪ್ರಚಾರದ ಭರಾಟೆಯ ನಡುವೆ ಮುಸ್ಲಿಂ, ಎಸ್ಸಿ ಎಸ್ಟಿ ಸಮುದಾಯಗಳಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಐಪಿಸಿ ಸೆಕ್ಷನ್ 505 (2) ಹಾಗೂ ಜನಪ್ರತಿನಿಧಿ ಕಾಯ್ದೆಯ 125ನೇ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಕೈಗೊಂಡಿದ್ದರು. ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಬೆಂಗಳೂರು ಕೇಂದ್ರ ಪೊಲೀಸ್ ಡಿಸಿಪಿ ಟಿ. ಶೇಖರ್ ಅವರು ಕೆಪಿಸಿಸಿ ಸದಸ್ಯರಾದ ರಮೇಶ್ ಬಾಬು ಎಂಬುವರಿಂದ ದೂರು ದಾಖಲಾಗಿದೆ. ಅದರ ಆಧಾರದಲ್ಲಿ ಜೆಪಿ ನಡ್ಡಾ, ಅಮಿತ್ ಮಾಳವೀಯ ಹಾಗೂ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ತನಿಖೆ ಆರಂಭವಾಗಿದೆ’’ ಎಂದು ತಿಳಿಸಿದ್ದರು.

LEAVE A REPLY

Please enter your comment!
Please enter your name here