Home ಬೆಂಗಳೂರು ನಗರ Bengaluru police takes help of Yamaraj to create Traffic awareness on the...

Bengaluru police takes help of Yamaraj to create Traffic awareness on the road | ಯಮರಾಜನನ್ನು ಕರೆಸಿ ಬೆಂಗಳೂರು ಪೊಲೀಸರಿಂದ ರಸ್ತೆಯಲ್ಲಿ ಸಂಚಾರಿ ಜಾಗೃತಿ

46
0
Bengaluru police takes help of Yamaraj to create Traffic awareness on the road

ಬೆಂಗಳೂರು:

ಟ್ರಾಫಿಕ್ ರೂಲ್ಸ್ ಪಾಲಿಸದ ವಾಹನ ಚಾಲಕರು ಹಾಗೂ ಸವಾರರಿಗಾಗಿ ಯಮ ಹಾಗೂ ಚಿತ್ರಗುಪ್ತ ಭೂಲೋಕಕ್ಕೆ ಬಂದು ಪಾಠ ಹೇಳಿರುವುದು ನಗರದ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ನಡೆದಿದೆ. ಉಪ್ಪಾರಪೇಟೆ ಸಂಚಾರ ಠಾಣೆ (Upparpet Traffic Police) ಪೊಲೀಸರು ಈ ವಿನೂತನ ಪ್ರಯತ್ನ ಮಾಡಿ ವಾಹನ ಸವಾರರಿಗೆ ಜಾಗೃತಿ ಮೂಡಿಸಿದ್ದಾರೆ.

ಹೆಲ್ಮೆಟ್ ಹಾಕದ ಈ ಸವಾರ ಎಷ್ಟು ಬಾರಿ ನಿಯಮ ಉಲ್ಲಂಘಿಸಿದ್ದಾನೆ ಎಂಬ ಯಮನ ಪ್ರಶ್ನೆಗೆ ಪುಸ್ತಕ ನೋಡಿ ಚಿತ್ರಗುಪ್ತ ಇಪ್ಪತ್ತು ಬಾರಿ ಎಂದು ಉತ್ತರಿಸಿದ್ದಾನೆ. ಈ ವೇಳೆ ಯಮ ಅಂತಹ ಸವಾರರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ನಿಮ್ಮ ಕುಟುಂಬ ನಿಮಗಾಗಿ ಕಾಯುತ್ತಿಲ್ಲವೇ? ಎಂದು ಎಚ್ಚರಿಸಿದ್ದಾನೆ. ಇದೇ ವೇಳೆ ಫೋನ್‍ನಲ್ಲಿ ಮಾತಾಡುತ್ತಿದ್ದ ಸವಾರನಿಗೆ ಕ್ಲಾಸ್ ತೆಗೆದುಕೊಂಡ ಯಮ, ವಾಹನ ಚಲಾಯಿಸುವಾಗ ನೀನು ಕರೆ ಮಾಡಿದ್ರೆ ಯಮಲೋಕಕ್ಕೆ ಕನೆಕ್ಟ್ ಆಗುತ್ತೆ ಎಂದು ಎಚ್ಚರಿಕೆ ನೀಡಿ ಕಳಿಸಿದ್ದಾನೆ.

ಸಂಚಾರ ನಿಯಮ ಪಾಲಿಸದ ಸವಾರರಿಗೆ ಗುಲಾಬಿ ಹೂ ನೀಡಿ, ಇನ್ಸ್‌ಪೆಕ್ಟರ್‌ ಕೃಷ್ಣಮೂರ್ತಿ ಹಾಗೂ ಟೀಂನಿಂದ ಟ್ರಾಫಿಕ್ ನಿಯಮಗಳ ಬಗ್ಗೆ ಅರಿವು ಮೂಡಿಸಿದ್ದಾರೆ.

LEAVE A REPLY

Please enter your comment!
Please enter your name here