Bengaluru | Railway Board Member Inspects redevelopment works of Yeshavantpur and Cantonment railway stations
ಬೆಂಗಳೂರು:
ರೈಲ್ವೆ ಮಂಡಳಿಯ ಸದಸ್ಯರಾದ (ಮೂಲಸೌಕರ್ಯ) ರೂಪ್ ನಾರಾಯಣ ಸುಂಕರ್ ಅವರು ಶುಕ್ರವಾರ ಬೈಯ್ಯಪ್ಪನಹಳ್ಳಿ-ವೈಟ್ಫೀಲ್ಡ್ ಚತುಷ್ಪಥ ಕಾಮಗಾರಿ ಹಾಗೂ ಹೊಸೂರು-ಬೈಯ್ಯಪ್ಪನಹಳ್ಳಿ ವಿಭಾಗದ ಕಾಮಗಾರಿಯನ್ನು ಪರಿಶೀಲಿಸಿದರು. ಅದೇ ರೀತಿ ಅವರು ಯಶವಂತಪುರ ಮತ್ತು ಬೆಂಗಳೂರು ದಂಡು ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.
ನಂತರ ನಾರಾಯಣ ಸುಂಕರ್ ಅವರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಸಮ್ಮೇಳನ ಸಭಾಂಗಣದಲ್ಲಿ ಬೆಂಗಳೂರು ವಿಭಾಗ, ರೈಲ್ವೆ ನಿರ್ಮಾಣ ಸಂಸ್ಥೆ, ಗತಿ ಶಕ್ತಿ, ಕೆ-ರೈಡ್, ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಪ್ರಾಧಿಕಾರ ಮತ್ತು ರೈಲು ವಿಕಾಸ್ ನಿಗಮ ಲಿಮಿಟೆಡ್ನ ಅಧಿಕಾರಿಗಳ ಜೊತೆಗೆ ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಕಾಮಗಾರಿ ಪ್ರಗತಿಯ ಬಗ್ಗೆ ಮೆಚ್ಚುಗೆ ಹಾಗೂ ಸಂತಸ ವ್ಯಕ್ತಪಡಿಸಿದರು. ಅವರು ಸಭೆಯೊಂದಿಗೆ ತಮ್ಮ ಆಲೋಚನೆಗಳು ಮತ್ತು ಅನುಭವಗಳನ್ನು ಹಂಚಿಕೊಂಡರು.

ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪ ಯೋಗೀಶ್ ಮೋಹನ್, ನೈಋತ್ಯ ರೈಲ್ವೆಯ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ಎಸ್.ಪಿ.ಎಸ್. ಗುಪ್ತಾ, ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ಮೆಕ್ಯಾನಿಕಲ್ ಇಂಜಿನಿಯರ್ ವಿ.ಕೆ. ಅಗರ್ವಾಲ್, ನಿರ್ಮಾಣ ವಿಭಾಗದ ಪ್ರಧಾನ ಹಣಕಾಸು ಸಲಹೆಗಾರ ಮತ್ತು ಮುಖ್ಯ ಲೆಕ್ಕಾಧಿಕಾರಿ ಅಂಜು ರಂಜನ್, ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ಇಂಜಿನಿಯರ್ ರಾಮ್ ಗೋಪಾಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
