ಬೆಂಗಳೂರು ;- ಇನ್ನೂ ಎರಡು ದಿನ ಬೆಂಗಳೂರಿನಲ್ಲಿ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ.
ಮುಂದಿನ ನಲವತ್ತೆಂಟು ಗಂಟೆಗಳಲ್ಲೊ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗಲಿದೆ. ಗುಡುಗು ಹಾಗೂ ಮಿಂಚಿನ ವಾತಾವರಣವೂ ಇರಲಿದೆ ಎಂದು ತಿಳಿಸಲಾಗಿದೆ.
ಇನ್ನೂ ಬೆಂಗಳೂರು ಮಹಾನಗರ ಸೋಮವಾರ ಸಂಜೆ ಸುರಿದ ನಿರಂತರ ಮಳೆಗೆ ತತ್ತರಿಸಿದೆ. ಬೆಂಗಳೂರು ನಗರದಲ್ಲಿ ಸೋಮವಾರ ಮಧ್ಯಾಹ್ನ ನಂತರ ಶುರುವಾದ ಮಳೆ ರಾತ್ರಿವರೆಗೂ ಬರುತ್ತಲೇ ಇತ್ತು. ಸಂಜೆ ನಂತರ ಜೋರಾಗಿದ್ದರಿಂದ ಕೆಲಸ ಮುಗಿಸಿ ಮನೆಯ ಕಡೆಗೆ ಹೊರಟವರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ತೊಂದರೆ ಅನುಭವಿಸಿದರು. ಅದರಲ್ಲೂ ಪ್ರಮುಖ ರಸ್ತೆಗಳಲ್ಲಿ ನೀರು ಹರಿಯುವ ಜತೆಗೆ ಕೆಲವು ಕಡೆ ನೀರು ನಿಂತಿದ್ದು ಸಮಸ್ಯೆಗೆ ಕಾರಣವಾಯಿತು. ತುಮಕೂರು ರಸ್ತೆಯ ಹೆಸರಘಟ್ಟ ಕ್ರಾಸ್, ಎಲೆಕ್ಟ್ರಾನಿಕ್ ಸಿಟಿ., ಮೈಸೂರು ರಸ್ತೆ, ಎಂಜಿ ರಸ್ತೆ, ರೂಪೇನ ಅಗ್ರಹಾರ, ಚಿಕ್ಕಪೇಟೆ, ಹೆಣ್ಣೂರಿನ ಥಣಿ ಸಂದ್ರ ಜಂಕ್ಷನ್, ಹೆಬ್ಬಾಳದ ಕಸ್ತೂರಿ ಗಾರ್ಡನ್ ರಸ್ತೆ ಸಹಿತ ಹಲವು ಕಡೆ ನೀರು ನಿಂತಿದ್ದು ಸವಾರರು ಪರದಾಡುವಂತಾಯಿತು.
The post Bengaluru Rain; ಇನ್ನೂ ಎರಡು ದಿನ ಬೆಂಗಳೂರಿನಲ್ಲಿ ಭಾರೀ ಮಳೆ – ಹವಮಾನ ಇಲಾಖೆ appeared first on Ain Live News.