ಬೆಂಗಳೂರು;- ಮತ್ತೆ ಬೆಂಗಳೂರಿಗೆ ಮಳೆಗಾಲ ಕಳೆ ಮರಳಿದೆ. ರಾಜ್ಯಾದ್ಯಂತ ಅಕ್ಟೋಬರ್ ಮೊದಲ ವಾರದಿಂದ ಹಿಂಗಾರು ಮಳೆ ಆಗಮನವಾಗಿದೆ.
ಆರಂಭದಲ್ಲಿ ಮಂದವಾಗಿದ್ದ ಮಳೆ ಸದ್ಯ ನಿಧಾನವಾಗಿ ಚುರುಕುಗೊಂಡಿದೆ. ಇನ್ನು ಬೆಂಗಳೂರಿನಲ್ಲಿ ಒಂದು ವಾರದ ಬಳಿಕ ಸೋಮವಾರ ಮಳೆಯ ಸಿಂಚನವಾಗಿದ್ದು, ನಗರದಾದ್ಯಂತ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ರಾಜಧಾನಿ ಬೆಂಗಳೂರಿನ ಕೇಂದ್ರ ಭಾಗಗಳಾದ ಮೇಖ್ರಿ ಸರ್ಕಲ್, ಗುಟ್ಟಹಳ್ಳಿ, ಹೆಬ್ಬಾಳ,ಶಿವಾನಂದ ಸರ್ಕಲ್, ಸೇರಿದಂತೆ ಹಲವೆಡೆ ಮಳೆಯಾಗಿದೆ.
ಮಳೆ ಎಚ್ಚರಿಕೆ ನೀಡಿದ ಭಾರತೀಯ ಹವಾಮಾನ ಇಲಾಖೆ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಳಿ ಸಹಿತ ಜೋರು ಮಳೆಯಾಗುವ ಸಾಧ್ಯತೆಯಿದ್ದು, ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಜಿಲ್ಲೆಗಳಿಗೆ ಅರ್ಲಟ್ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
The post Bengaluru Rain; ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ವರುಣನ ಎಂಟ್ರಿ, ಹವಮಾನ ಇಲಾಖೆ ಎಚ್ಚರಿಕೆ appeared first on Ain Live News.