Home ಬೆಂಗಳೂರು ನಗರ Bengaluru tree falls in Chamarajpet: ಬೆಂಗಳೂರು ಮಳೆ: ಚಾಮರಾಜಪೇಟೆಯಲ್ಲಿ ಬೃಹತ್‌ ಮರ ಬುಡಸಮೇತ ಉರುಳಿ...

Bengaluru tree falls in Chamarajpet: ಬೆಂಗಳೂರು ಮಳೆ: ಚಾಮರಾಜಪೇಟೆಯಲ್ಲಿ ಬೃಹತ್‌ ಮರ ಬುಡಸಮೇತ ಉರುಳಿ ರಸ್ತೆ ಬಂದ್‌, ಅದೃಷ್ಟವಶಾತ್‌ ದುರಂತ ತಪ್ಪಿತು

12
0

ಬೆಂಗಳೂರು: ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವು ಕಡೆ ಅವಾಂತರಗಳು ಸೃಷ್ಟಿಯಾಗಿವೆ. ಚಾಮರಾಜಪೇಟೆಯ ಮುಖ್ಯರಸ್ತೆಯಲ್ಲಿ ಬೃಹತ್‌ ಗಾತ್ರದ ಮರ ಬುಡಸಮೇತ ಉರುಳಿಬಿದ್ದು ರಸ್ತೆ ಬಂದ್‌ ಆಗಿರುವ ಘಟನೆ ನಡೆದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸದಿದ್ದರೂ, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಮಂಗಳವಾರ ಮಧ್ಯರಾತ್ರಿ 12:30ರ ಸುಮಾರಿಗೆ ಉಮಾ ಟಾಕೀಸ್‌ ಮತ್ತು ಮಕ್ಕಳ ಕೂಟದ ಬಳಿ ಇದ್ದ ಹಳೆಯ ಮರ ಒಂದು ಬಸ್‌ ಶೆಲ್ಟರ್‌ ಸೇರಿದಂತೆ ರಸ್ತೆಗೆ ಬಿದ್ದು ಸಂಚಾರ ತಡೆ ಉಂಟುಮಾಡಿದೆ. ಮರ ಪಕ್ಕದ ಮನೆ ಗೋಡೆಯವರೆಗೆ ತಾಗಿ ಹಾನಿ ಮಾಡುವ ಪರಿಸ್ಥಿತಿ ಉಂಟಾದರೂ ದೊಡ್ಡ ದುರಂತ ತಪ್ಪಿದೆ.

ಸ್ಥಳೀಯ ನಿವಾಸಿಗಳು, “ಈ ಮರದ ಕೊಂಬೆಗಳು ಹಿಂದೆ ಹಲವು ಬಾರಿ ಬಿದ್ದಿದ್ದವು. ನಾವು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಆದರೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಿಲ್ಲ. ಇಷ್ಟು ದೊಡ್ಡ ಮರ ಉರುಳಿರುವುದು ಗಂಭೀರ ಅಪಾಯ ಉಂಟುಮಾಡಬಹುದಿತ್ತು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ನಂತರ ತಕ್ಷಣ ಅರಣ್ಯ ಇಲಾಖೆ ಮತ್ತು ಜಿಬಿಎ ಸಿಬ್ಬಂದಿ ಸ್ಥಳಕ್ಕಾಗಮಿಸಿ ಯಂತ್ರೋಪಕರಣಗಳ ಸಹಾಯದಿಂದ ಮರ ತೆರವು ಕಾರ್ಯ ಪ್ರಾರಂಭಿಸಿದರು. ಆದರೆ ಬೆಳಗ್ಗಿನ ವೇಳೆ ಚಾಮರಾಜಪೇಟೆ ಮುಖ್ಯರಸ್ತೆ ಸಂಪೂರ್ಣ ಬಂದ್‌ ಆಗಿದ್ದರಿಂದ ಪ್ರಯಾಣಿಕರು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.

Also Read: Bengaluru Rains: Huge Tree Uprooted in Chamarajpet, Road Blocked but Major Tragedy Averted

ನಾಗರಿಕರು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಗಾಲದಲ್ಲಿ ಮರ ಉರುಳುವ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ, ಅಪಾಯಕರ ಮರಗಳನ್ನು ಮುಂಚಿತವಾಗಿ ಗುರುತಿಸಿ ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.

ಪ್ರಸ್ತುತ ಮರ ತೆರವು ಕಾರ್ಯ ನಡೆಯುತ್ತಿದ್ದು, ಅಧಿಕಾರಿಗಳು ಸಂಚಾರವನ್ನು ಬೇಗ ಪುನರಾರಂಭ ಮಾಡುವ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here