ಬೆಂಗಳೂರು: ನಗರದ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನಡೆದ ಸಫಾರಿ ವೇಳೆ ನಡೆದ ಘಟನೆ ಒಂದು ಭೀತಿ ಹುಟ್ಟಿಸಿದೆ. 13 ವರ್ಷದ ಬಾಲಕನೊಬ್ಬನ ಮೇಲೆ ಚಿರತೆ ದಾಳಿ ನಡೆಸಿದ್ದು, ಅವನ ಕೈಗೆ ಗಂಭೀರ ಗಾಯಗಳಾಗಿವೆ.
ಪೋಷಕರೊಂದಿಗೆ ಸಫಾರಿಗೆ ಬಂದಿದ್ದ ಬಾಲಕ, ಚಿರತೆ ವಾಹನವನ್ನು ಹಿಂಬಾಲಿಸಿ ಹಾರಿದಾಗ ದಾಳಿಗೆ ಗುರಿಯಾಗಿದ್ದಾನೆ. ಚಿರತೆಯ ಪಂಜಗಳಿಂದ ಬಾಲಕನ ಕೈಗೆ ತೀವ್ರ ಗಾಯವಾದ ದೃಶ್ಯಗಳು ದೃಶ್ಯಾವಳಿಗಳ ಮೂಲಕ ಹೊರಬಿದ್ದಿವೆ.

ಗಾಯಗೊಂಡ ಬಾಲಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ಮೂಲಗಳ ಪ್ರಕಾರ ಬಾಲಕನ ಸ್ಥಿತಿ ಸ್ಥಿರವಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಸಾಧ್ಯತೆಯಿದೆ.
ಈ ಆಘಾತಕಾರಿ ಘಟನೆ ಬಳಿಕ ಪ್ರವಾಸಿಗರಲ್ಲಿ ಆತಂಕ ಸೃಷ್ಟಿಯಾಗಿದೆ. ಬನ್ನೇರುಘಟ್ಟ ಉದ್ಯಾನ ನಿರ್ವಹಣಾ ಮಂಡಳಿ, ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದೆ.