ಬೆಂಗಳೂರು:
ಸಾಫ್ಟ್ ವೇರ್ ಇಂಜಿನಿಯರ್ ಯುವಕನೊಬ್ಬ ಅಪಾರ್ಟ್ಮೆಂಟ್ನ 33ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಕೆ.ಆರ್ ಪುರದ ಅಯ್ಯಪ್ಪನಗರದಲ್ಲಿ ನಿನ್ನೆ(ಡಿ.29) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನಗರದ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ದಿಪಾಂಶು ಶರ್ಮಾ ಎಂಬುವವರು ಅಪಾರ್ಟ್ಮೆಂಟ್ನ 33ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಅವರ ತಂದೆ ಚಮನ್ ಶರ್ಮಾ ದೂರು ನೀಡಿದ್ದಾರೆ.
ದಿಪಾಂಶು ನಿನ್ನೆ ಸ್ನೇಹಿತರ ಜೊತೆ ಫ್ಲ್ಯಾಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಆತ ಸಿಗರೇಟ್ ಸೇದಲೆಂದು ಬಾಲ್ಕನಿಗೆ ಬಂದಿದ್ದಾನೆ. ಈ ವೇಳೆ ಆಯತಪ್ಪಿದ್ದು, 33ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ.
ಘಟನೆ ಸಂಬಂಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯು ಪ್ರಗತಿಯಲ್ಲಿದೆ ಎಂದು ಪೋಲಿಸರು ತಿಳಿಸಿದ್ದಾರೆ.