ಬೆಂಗಳೂರು:
ರಸ್ತೆ ಅಪಘಾತದಲ್ಲಿ ರಾಜ್ಯ ಮಟ್ಟದ ಫುಟ್ ಬಾಲ್ ಆಟಗಾರ ಸಾವನ್ನಪ್ಪಿದ ಘಟನೆ ಕೆ ಆರ್ ಪುರಂ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. 27 ವರ್ಷದ ಮೊನೀಶ್ ಕೆ ಸಾವನ್ನಪ್ಪಿದ ಆಟಗಾರ.
ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಮೊನೀಶ್ ಬೈಕ್ ನಲ್ಲಿ ಹೋಗ್ತಿದ್ದ. ಈ ವೇಳೆ ಆತನ ಬೈಕ್ ಗೆ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೊನೀಶ್ ತೀವ್ರ ಗಾಯಗೊಂಡಿದ್ದ. ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೊನೀಶ್ ಸಾವನ್ನಪ್ಪಿದ್ದಾನೆ.
ಪರಿಕ್ರಮ ಎಫ್ ಸಿ, ಡೆಕ್ಕನ್ ಎಫ್ ಸಿ, ಯಂಗ್ ಚಾಲೆಂಜರ್ಸ್ ಸೇರಿ ವಿವಿಧ ಕ್ಲಬ್ ಗಳ ಪರ ಮೊನೀಶ್ ಆಡಿದ್ದ. ಸದ್ಯ ಬೆಂಗಳೂರು ಈಗಲ್ಸ್ ಎಫ್ ಸಿ ಪರ ಆಡ್ತಿದ್ದ. ಮಂಗಳವಾರ ಟೂರ್ನಿಯೊಂದರಲ್ಲಿ ಭಾಗಿಯಾಗಬೇಕಿತ್ತು. ಆದ್ರೆ ಮೊನೀಶ್ ನಿಧನದ ಹಿನ್ನೆಲೆ. ಪಂದ್ಯವನ್ನ ಬೆಂಗಳೂರು ಈಗಲ್ಸ್ ಎಫ್ ಸಿ ಮುಂದೂಡಿದೆ.