Home ಅಪರಾಧ ಅಕ್ರಮ ಬೆಟ್ಟಿಂಗ್ ದಂಧೆ : ನಾಲ್ವರ ಬಂಧನ: 20 ಲಕ್ಷರೂ ವಶ

ಅಕ್ರಮ ಬೆಟ್ಟಿಂಗ್ ದಂಧೆ : ನಾಲ್ವರ ಬಂಧನ: 20 ಲಕ್ಷರೂ ವಶ

65
0

ಬೆಂಗಳೂರು:

ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಜೂಜು ಮತ್ತು ಬೆಟ್ಟಿಂಗ್ ದಂಧೆಯಲ್ಲಿ ನಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿದ್ದಾರೆ.

ಸತ್ಯನಾರಾಯಣ, ಕುಮಾರ್, ಶ್ರೀಕಾಂತ್, ಸಂದೀಪ್ ಬಂಧಿತ ಆರೋಪಿಗಳು.ಬಂಧಿತರಿಂದ 20.06 ಲಕ್ಷ ರೂ ನಗದು, 7 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಆರ್ ಪಿ ಲೇಔಟ್ ನ ಮನೆಯೊಂದರಲ್ಲಿ ಕುದುರೆ ರೇಸಿಂಗ್ ನಲ್ಲಿ ಬೆಟ್ಟಿಂಗ್ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಎಸಿಪಿ ಹನುಮಂತರಾಯ್ಯ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.ಘಟನೆಗೆ ಸಂಬಂಧಿಸಿದಂತೆ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here