2025-26ನೇ ಹಣಕಾಸು ವರ್ಷಕ್ಕೆ ₹487.49 ಕೋಟಿ ಅಂತಿಮ ಲಾಭಾಂಶ ಘೋಷಿಸಿದ BHEL; ಕೇಂದ್ರಕ್ಕೆ ₹283.56 ಕೋಟಿ
ನವದೆಹಲಿ/ಬೆಂಗಳೂರು: 2025-26ನೇ ಹಣಕಾಸು ವರ್ಷಕ್ಕೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಶೇ.70ರಷ್ಟು ಅಂತಿಮ ಲಾಭಾಂಶವಾಗಿ ₹487.49 ಕೋಟಿ ಘೋಷಿಸಿದ್ದು, ಇದರಲ್ಲಿ ಭಾರತ ಸರ್ಕಾರಕ್ಕೆ ₹283.56 ಕೋಟಿ ಪಾವತಿಯಾಗಲಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ X ಪೋಸ್ಟ್ನಲ್ಲಿ ತಿಳಿಸಿದ್ದಾರೆ.
2024-25ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ರಾಷ್ಟ್ರೀಯ ಬೊಕ್ಕಸಕ್ಕೆ BHEL ನೀಡಿರುವ ಕೊಡುಗೆ 2.5 ಪಟ್ಟು ಹೆಚ್ಚು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಭೆಯಲ್ಲಿ ಭಾರೀ ಕೈಗಾರಿಕೆಗಳ ಸಚಿವಾಲಯ ಮತ್ತು BHELನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಸಚಿವರ ಪೋಸ್ಟ್ ತಿಳಿಸಿದೆ.
BHEL ತಂಡವನ್ನು ಅಭಿನಂದಿಸಿದ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತ ಉಪಕ್ರಮಗಳನ್ನು ಬಲಪಡಿಸುವಲ್ಲಿ ಸಾರ್ವಜನಿಕ ವಲಯದ ಈ ಸಂಸ್ಥೆ ತನ್ನ ಪಾತ್ರವನ್ನು ಮುಂದುವರಿಸಲಿದೆ ಎಂದು ಹೇಳಿದ್ದಾರೆ.
