ದೊಡ್ಮನೆಯ ಅಸಲಿ ಆಟ ಶುರುವಾಗಿದೆ. ಇದರ ನಡುವೆ ಈ ಸೀಸನ್‌ನಲ್ಲೂ ಕೂಡ ಪ್ರೀತಿ ಚಿಗುರುವ ಮುನ್ಸೂಚನೆ ಸಿಕ್ಕಿದೆ. ‘ಚಾರ್ಲಿ’ (Charlie) ಸುಂದರಿ ಸಂಗೀತಾ (Sangeetha Sringeri) ಮೇಲೆ ಕಾರ್ತಿಕ್‌ಗೆ ಲವ್ ಆಗಿದ್ಯಾ ಎಂಬ ಅನುಮಾನ ಮೂಡಿದೆ. ದೊಡ್ಮನೆ ವೇದಿಕೆ ಮೇಲೆ ಮನೆಗೆ ಸೊಸೆಯನ್ನ ಕರೆಕೊಂಡು ಬರುತ್ತೀನಿ ಅಂತಾ ಕಾರ್ತಿಕ್ (Karthik) ಹೇಳಿದ್ದರು. ಅದೇ ಹಾದಿಯಲ್ಲಿ ಈಗ ನಟ ಹೆಜ್ಜೆ ಇಡ್ತಿದ್ದಾರೆ.
ಬಿಗ್ ಬಾಸ್ ಮನೆ (Bigg Boss Kannada 10) ಅದ್ಮೇಲೆ ಲವ್, ರೊಮ್ಯಾನ್ಸ್ ಹೀಗೆ ಒಂದಲ್ಲಾ ಒಂದು ವಿಚಾರವಾಗಿ ಸ್ಪರ್ಧಿಗಳು ಹೈಲೆಟ್ ಆಗುತ್ತಾರೆ. ಇಲ್ಲಿನ ಗೆಳೆತನ ದೊಡ್ಮನೆಯಿಂದ ಹೊರ ಬಂದ ಮೇಲೆ ಮದುವೆಯಾದ ಉದಾಹರಣೆಗಳು ಇವೆ. ಒಂದ್ ಕಡೆ ಇಶಾನಿ- ಸ್ನೇಹಿತ್ ಲವ್ವಿ-ಡವ್ವಿ ನಡೆಯುತ್ತಾ ಇದ್ರೆ, ಇನ್ನೊಂದು ಕಡೆ ಸಂಗೀತಾ- ಕಾರ್ತಿಕ್ ಲವ್ ಸ್ಟೋರಿ ಶುರುವಾದಂತಿದೆ.
ಸಂಗೀತಾ ಹೋದಲೆಲ್ಲ ಕಾರ್ತಿಕ್ ಇರುತ್ತಾರೆ. ಇದನ್ನೆಲ್ಲಾ ಫ್ಯಾನ್ಸ್ ಗಮನಕ್ಕೆ ಬಂದಿದೆ. ದಿವ್ಯಾ-ಅರವಿಂದ್, ಚಂದನ್-ನಿವೇದಿತಾ ಅವರಂತೆ ಕಾರ್ತಿಕ್-ಸಂಗೀತಾ ಕೂಡ ಗುಡ್ ನ್ಯೂಸ್ ಕೊಡುತ್ತಾರಾ ಹೇಗೆ? ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಈ ಸುದ್ದಿಗೆ ಪುಷ್ಟಿ ನೀಡುವಂತಹ ಘಟನೆ ಕೂಡ ನಡೆದಿದೆ. ಬಿಗ್ ಬಾಸ್, ದೊಡ್ಮನೆಯಲ್ಲಿ ನಾಮಿನೇಟ್ ಮಾಡುವ ಪ್ರಕ್ರಿಯೆಯನ್ನ ಸ್ಪರ್ಧಿಗಳಿಗೆ ನೀಡಿದ್ದರು. ಈ ವೇಳೆ ಅಸಮರ್ಥ ತಂಡದಲ್ಲಿರೋ ಸಂಗೀತಾ, ನೆಲದ ಮೇಲೆ ಕೂರುವ ಬದಲು ಸೋಫಾ ಮೇಲೆ ಕುಳಿತಿದ್ದರು. ಸಂಗೀತಾ, ರೂಲ್ಸ್ ಬ್ರೇಕ್ ಮಾಡಿದ್ದಾರೆ ಎಂದು ವಿನಯ್ (Vinay Gowda) ನಾಮಿನೇಟ್ ಮಾಡಿದ್ದರು.
The post Bigg Boss: ಸಂಗೀತಾ- ಕಾರ್ತಿಕ್ ನಡುವೆ ಗುಸು ಗುಸು ಪಿಸು ಪಿಸು: ಏನಿದು ಹೊಸ ಲವ್ ಸ್ಟೋರಿ?! appeared first on Ain Live News.