ಬೆಂಗಳೂರು:
‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ಹುಲಿ ಉಗುರು ಹೊಂದಿರುವ ಆರೋಪ ಅವರ ಮೇಲಿದೆ. ಸದ್ಯ ಅವರನ್ನು 14 ದಿನ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಸಂತೋಷ್ ಅವರು ಹುಲಿ ಉಗುರು ಹೊಂದಿದ್ದರಿಂದ ಅವರನ್ನು ‘ವನ್ಯಜೀವಿ ಸಂರಕ್ಷಣಾ ಕಾಯ್ದೆ’ ಅಡಿಯಲ್ಲಿ ಬಂಧಿಸಲಾಗಿದೆ.
ಅಕ್ಟೋಬರ್ 23ರ ಎಪಿಸೋಡ್ನಲ್ಲಿ ಸಂತೋಷ್ ಅವರ ಎಲಿಮಿನೇಷನ್ ನೋಡಲು ಕಾದಿದ್ದರು. ಆದರೆ, ಅದನ್ನು ಎಪಿಸೋಡ್ ಕೊನೆಯಲ್ಲಿ ಕೆಲವೇ ಸೆಕೆಂಡ್ ತೋರಿಸಲಾಗಿದೆ. ಕನ್ಫೆಷನ್ ರೂಂಗೆ ಕರೆದು ಸಂತೋಷ್ ಅವರ ಹಣೆಗೆ ಪಟ್ಟಿ ಕಟ್ಟಲಾಗಿದೆ. ಆ ಬಳಿಕ ಅವರನ್ನು ಕರೆದೊಯ್ಯಲಾಗಿದೆ. ಆದರೆ, ಇದನ್ನು ಎಪಿಸೋಡ್ನಲ್ಲಿ ತೋರಿಸಿಲ್ಲ. ಸಂತೋಷ್ ಹೊರ ಹೋದ ಬಗ್ಗೆ ಬಿಗ್ ಬಾಸ್ನಲ್ಲೂ ಯಾವುದೇ ಚರ್ಚೆ ಆಗಿಲ್ಲ.
ಸದ್ಯ ಸಂತೋಷ್ ಅವರನ್ನು ವಿಚಾರಣೆ ಮಾಡಲಾಗುತ್ತಿದೆ. ಒಂದೊಮ್ಮೆ ಅಪರಾಧ ಸಾಬೀತಾದರೆ ಸಂತೋಷ್ ಅವರಿಗೆ 3-7 ವರ್ಷಗಳವರೆಗೆ ಶಿಕ್ಷೆ ಹಾಗೂ 10,000ರಿಂದ 25,000ದವರೆಗೆ ದಂಡ ವಿಧಿಸುವ ಅವಕಾಶ ಇದೆ. ಮುಂದೇನಾಗುತ್ತದೆ ಎಂಬ ಬಗ್ಗೆ ಅವರ ಅಭಿಮಾನಿಗಳಿಗೆ ಆತಂಕ ಇದೆ.
ವರ್ತೂರು ಸಂತೋಷ್ ಅವರು ರೈತ. ಟೊಮ್ಯಾಟೋ ಬೆಳೆದು ಅವರು ಸಾಕಷ್ಟು ಲಾಭ ಕಂಡರು. ಹಳ್ಳಿಕಾರ್ ಕ್ಯಾಟಲ್ ಬ್ರೀಡ್ನ ಬಗ್ಗೆ ಅವರು ಹೆಚ್ಚು ಕಾಳಜಿ ಹೊಂದಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆಗೆ ಒಳಗಾಗುತ್ತಾರೆ. ಬಿಗ್ ಬಾಸ್ಗೆ ಹೋದ ಬಳಿಕ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು.