Home Uncategorized Bigg Boss Kannada: ಮೊದಲ ಕ್ಯಾಪ್ಟನ್ಸಿಯಾಗಿ ಸ್ನೇಹಿತ್‌ ಆಯ್ಕೆ: ಹೇಗೆ ನಡೆಸಿಕೊಳ್ಳುತ್ತಾರೆ ನೋಡ್ಬೇಕು!

Bigg Boss Kannada: ಮೊದಲ ಕ್ಯಾಪ್ಟನ್ಸಿಯಾಗಿ ಸ್ನೇಹಿತ್‌ ಆಯ್ಕೆ: ಹೇಗೆ ನಡೆಸಿಕೊಳ್ಳುತ್ತಾರೆ ನೋಡ್ಬೇಕು!

34
0

ಬಿಗ್ ಬಾಸ್ (Bigg Boss Kannada) ಮನೆಯ ಮೊದಲ ಕ್ಯಾಪ್ಟನ್ ಆಗಬೇಕು ಎನ್ನುವ ಕನಸು ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ, ಬಿಗ್ ಬಾಸ್ ಆಡಿಸುವ ಆಟದಲ್ಲಿ ಅವರು ಗೆಲ್ಲಬೇಕು. ಟಾಸ್ಕ್ ಗೆಲ್ಲದೇ ಕ್ಯಾಪ್ಟನ್ ಆಗುವುದಕ್ಕೆ ಸಾಧ್ಯವೇ ಇಲ್ಲ. ನೆನ್ನೆಯೂ ಕ್ಯಾಪ್ಟನ್ (Captain) ಗಾಗಿ ಹಲವರು ಟಾಸ್ಕ್ ಗಳು ನಡೆದವು. ಅಂತಿಮವಾಗಿ ಬಿಗ್ ಬಾಸ್ ಮನೆಗೆ ಮೊದಲ ಕ್ಯಾಪ್ಟನ್ ಆಗ ಸ್ನೇಹಿತ್ (Snehith) ಆಯ್ಕೆಯಾಗಿದ್ದಾರೆ.

ತುಕಾಲಿ ಸಂತು ಮತ್ತು ನಮ್ರತಾ ಗೌಡ (Namrata Gowda) ಕ್ಯಾಪ್ಟನ್ ಆಟದಲ್ಲಿ ಪ್ರತಿಸ್ಪರ್ಧಿಯಾಗಿದ್ದರು. ಈ ಇಬ್ಬರೂ ಕ್ಯಾಪ್ಟನ್ ಶಿಪ್ ಗೆಲ್ಲುವನ್ನು ವಿಫಲರಾದರು. ಹಾಗಾಗಿ ಮೊದಲ ಕ್ಯಾಪ್ಟನ್ ಪಟ್ಟವನ್ನು ಸ್ನೇಹಿತ್ ಮುಡಿಗೇರಿಸಿಕೊಂಡರು. ಕ್ಯಾಪ್ಟನ್ ಆಗುತ್ತಿದ್ದಂತೆಯೇ ಮನೆಯಲ್ಲಿ ನಿರಾಸೆ ಕಾದಿತ್ತು. ಯಾಕೆಂದರೆ, ಕ್ಯಾಪ್ಟನ್ ಮೀರಿಸುವಂತಹ ವ್ಯಕ್ತಿಯೊಬ್ಬರು ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಮಾಡಿದ್ದಾರೆ.

ದೊಡ್ಮನೆಗೆ ಮತ್ತೊಂದು ಸಲ ಒಳ್ಳೆಯ ಹುಡುಗ ಪ್ರಥಮ್ (Pratham) ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಸೀಸನ್ 4ರಲ್ಲಿ ಕಂಟೆಸ್ಟೆಂಟ್ ಆಗಿ ಹೋದವರು, ಟ್ರೋಫಿ ಗೆದ್ದುಕೊಂಡು ಹೊರ ಬಂದರು. ಇದೀಗ ಪ್ರಥಮ್ ಟಾಸ್ಕ್ ಆಡಿಸುವುದಕ್ಕಾಗಿ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಲಾರ್ಡ್ ಪ್ರಥಮ್ ಹೆಸರಿನಲ್ಲಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಲೇ ಗತ್ತಿನ ಮಾತುಗಳಿಂದ ಒಂದು ರೀತಿಯಲ್ಲಿ ಕುತೂಹಲ ಮೂಡಿಸಿದ್ದಾರೆ.

The post Bigg Boss Kannada: ಮೊದಲ ಕ್ಯಾಪ್ಟನ್ಸಿಯಾಗಿ ಸ್ನೇಹಿತ್‌ ಆಯ್ಕೆ: ಹೇಗೆ ನಡೆಸಿಕೊಳ್ಳುತ್ತಾರೆ ನೋಡ್ಬೇಕು! appeared first on Ain Live News.

LEAVE A REPLY

Please enter your comment!
Please enter your name here