ಇಮೇಜ್ ಸೊರ್ಸ್: https://x.com/ColorsKannada/status/2012955635474964768
ಬೆಂಗಳೂರು: ಬಹು ದಿನಗಳ ಕುತೂಹಲಕ್ಕೆ ತೆರೆ ಎಳೆದ Bigg Boss Kannada 12 ಗ್ರ್ಯಾಂಡ್ ಫಿನಾಲೆಯಲ್ಲಿ ನಟ ಗಿಲ್ಲಿ ಈ ಸೀಸನ್ನ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ರಕ್ಷಿತಾ ರನ್ನರ್-ಅಪ್ ಆಗಿದ್ದು, ಅಶ್ವಿನಿ ಗೌಡ ಎರಡನೇ ರನ್ನರ್-ಅಪ್ ಸ್ಥಾನ ಪಡೆದುಕೊಂಡಿದ್ದಾರೆ.
ಸೀಸನ್ 12ರ ಚಾಂಪಿಯನ್ ಆಗಿ ಗಿಲ್ಲಿ ₹50 ಲಕ್ಷ ನಗದು ಬಹುಮಾನದೊಂದಿಗೆ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಉಡುಗೊರೆಯಾಗಿ ಪಡೆದಿದ್ದಾರೆ. ಬಹುಮಾನ ಮೊತ್ತ ಮತ್ತು ಉಡುಗೊರೆಗಳ ದೃಷ್ಟಿಯಿಂದ ಈ ಫಿನಾಲೆ ಗಮನಸೆಳೆದಿದೆ.
ಈ ಸೀಸನ್ದಲ್ಲಿ ಸ್ಪರ್ಧಿಗಳಿಗೆ ಅಪಾರ ಜನಬೆಂಬಲ ದೊರೆತಿದ್ದು, ವಿಶೇಷವಾಗಿ ಗಿಲ್ಲಿಗೆ ಸಿಕ್ಕ ಬೆಂಬಲ ಹಿಂದಿನ ಸೀಸನ್ಗಳಿಗಿಂತಲೂ ಹೆಚ್ಚೆನ್ನಲಾಗಿದೆ. ಸ್ಪರ್ಧೆಗಳಲ್ಲಿನ ಸ್ಥೈರ್ಯ, ಮನರಂಜನೆ ಮತ್ತು ಜನ ಸಂಪರ್ಕವೇ ಗಿಲ್ಲಿಯ ಗೆಲುವಿಗೆ ಕಾರಣವೆಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಎರಡನೇ ರನ್ನರ್-ಅಪ್ ಆದ ಅಶ್ವಿನಿ ಗೌಡ ಅವರಿಗೆ ₹14 ಲಕ್ಷ, ಫಿನಾಲೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಹೊರಬಂದ ಕಾವ್ಯಾ ಶೈವ ಅವರಿಗೆ ₹10 ಲಕ್ಷ ಬಹುಮಾನ ನೀಡಲಾಗಿದೆ.
ಒಟ್ಟು 24 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದ ಈ ಸೀಸನ್ನಲ್ಲಿ, ಅಂತಿಮವಾಗಿ 6 ಸ್ಪರ್ಧಿಗಳು ಫಿನಾಲೆಗೆ ತಲುಪಿದ್ದರು. ಗಿಲ್ಲಿ, ರಕ್ಷಿತಾ, ಅಶ್ವಿನಿ ಗೌಡ, ಮ್ಯೂಟೆಂಟ್ ರಘು, ಕಾವ್ಯಾ ಶೈವ ಮತ್ತು ಧನುಷ್ ಫಿನಾಲಿಸ್ಟ್ಗಳಾಗಿದ್ದರು.
ಹೈ ಡ್ರಾಮಾ, ತೀವ್ರ ಸ್ಪರ್ಧೆ ಮತ್ತು ದಾಖಲೆ ಮಟ್ಟದ ವೀಕ್ಷಕರ ಬೆಂಬಲದೊಂದಿಗೆ ಬಿಗ್ ಬಾಸ್ ಕನ್ನಡ 12 ಅತ್ಯಂತ ಯಶಸ್ವಿ ಸೀಸನ್ಗಳಲ್ಲೊಂದು ಎಂದು ಗುರುತಿಸಿಕೊಂಡಿದೆ.
