ಬಿಗ್ ಬಾಸ್ ಮನೆಗೆ ಈ ಬಾರಿ ಮೈಕಲ್ ಎನ್ನುವವರು ಪ್ರವೇಶ ಮಾಡಿದ್ದಾರೆ. 11ನೇ ಸ್ಪರ್ಧಿಯಾಗಿ ಅವರು ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟಿದ್ದಾರೆ. ಈ ಮೈಕಲ್ ಯಾರು ಎನ್ನುವ ಕುತೂಹಲ ಎಲ್ಲರದ್ದು. ನೈಜಿರಿಯಾ ಮತ್ತು ಕನ್ನಡದ ನೆಲದಲ್ಲಿ ಬೆಳೆದ ಮೈಕಲ್, ಬಾಸ್ಕೆಟ್ ಬಾಲ್ ಆಟಗಾರ. ಜೊತೆಗೆ ಮಾಡೆಲ್ ಕೂಡ.
ಹಲವಾರು ಬ್ರ್ಯಾಂಡ್ ಗಳಿಗೆ ಮಾಡೆಲಿಂಗ್ ಮಾಡಿದ ಹೆಗ್ಗಳಿಕೆ ಮೈಕಲ್ ಅವರದ್ದು. ನೈಜಿರಿಯಾದಲ್ಲಿ ಬೆಳೆದರೂ, ಕನ್ನಡವನ್ನು ಸುಲಲಿತವಾಗಿ ಮಾತನಾಡುತ್ತಾರೆ. ಜೊತೆಗೆ ಬರ್ಗರ್ ತಯಾರಿಸುವ ಹೋಟೆಲ್ ಉದ್ಯಮದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಮೈಕಲ್. ಈ ಬಾರಿ ಬಿಗ್ ಬಾಸ್ ಗೆಲ್ಲುವ ವಿಶ್ವಾಸ ಅವರದ್ದು.
The post BiggBoss Kannada: ಬಿಗ್ ಬಾಸ್ ಮನೆಗೆ ಈ ಬಾರಿ ಮೈಕಲ್ ಎನ್ನುವವರ ಪ್ರವೇಶ: ಯಾರೀತ? appeared first on Ain Live News.