
BJP candidate Manikanth Rathod claims fake audio clip circulated to kill Mallikarjuna Kharge, wife and children
ಬೆಂಗಳೂರು:
ನಕಲಿ ಆಡಿಯೋ ಸೃಷ್ಟಿಸಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರು ಹೇಳುತ್ತಿರುವುದೆಲ್ಲವೂ ಸುಳ್ಳು ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಶನಿವಾಸ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಮಣಿಕಂಠ ರಾಥೋಡ್ ಅವರು ಕಾಂಗ್ರೆಸ್ ನಾಯಕರ ಆರೋಪಗಳನ್ನು ನಿರಾಕರಿಸಿದ್ದಾರೆ.
ನನ್ನ ವಿರುದ್ಧ ಕಾಂಗ್ರೆಸ್ ನಾಯಕರು ಹೇಳುತ್ತಿರುವುದಲ್ಲವೂ ಸುಳ್ಳು. ನಕಲಿ ಆಡಿಯೋವನ್ನು ಸೃಷ್ಟಿಸಿದ್ದಾರೆ. ಸೋಲುವ ಭೀತಿಯಿಂದ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ಈ ಹಿಂದೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಸುರ್ಜೇವಾಲಾ ಅವರು, ಬಿಜೆಪಿ ನಾಯಕರು ನಿರಂತರವಾಗಿ ಕಾನೂನು ಉಲ್ಲಂಘನೆ ಮಾಡುತ್ತಿದ್ದರೂ ಚುನಾವಣಾ ಆಯೋಗ ಯಾವ ಕ್ರಮ ಕೈಗೊಂಡಿದೆ? ಬಿಜೆಪಿ ಖರ್ಗೆ ಅವರ ಹತ್ಯೆಗೆ ಸಂಚು ರೂಪಿಸುವಷ್ಟ ನೀಚ ಮಟ್ಟಕ್ಕೆ ಇಳಿಯುವುದಾದರೆ, ಅವರ ಹತ್ಯೆ ಮಾಡಿ. ಆಮೂಲಕವಾದರೂ ಬಿಜೆಪಿ ರಕ್ತದಾಹ ನೀಗುವುದಾದರೆ ಅವರನ್ನು ಹತ್ಯೆ ಮಾಡಿ ಎಂದು ಹರಿಹಾಯ್ದಿದ್ದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಅವರ ಪತ್ನಿ ಹಾಗೂ ಮಕ್ಕಳ ಹತ್ಯೆಗೆ ಸಂಚು ರೂಪಿಸಿರುವುದನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಈ ಬೆದರಿಕೆ ಹಾಕಿರುವುದು ಬೇರಾರೂ ಅಲ್ಲ, ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಈತ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿಯ ಆತ್ಮೀಯ ನೀಲಿ ಕಂಗಳ ಹುಡುಗ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಹಾಗೂ ಬೊಮ್ಮಾಯಿ ಅವರು ಮೌನಕ್ಕೆ ಶರಣಾಗಿದ್ದಾರೆ. ಆದರೆ ರಾಜ್ಯದ ಜನ ಇದನ್ನು ಸಹಿಸಿಕೊಂಡು ಕೂರುವುದಿಲ್ಲ, ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.