ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್.ಅರುಣ್ ಅವರು ಇಂದು ಗೌರವಾನ್ವಿತ ರಾಜ್ಯಪಾಲರನ್ನು ಭೇಟಿಯಾಗಿದ್ದರು.
ರಾಜ್ಯದ ಹಣಕಾಸು ಅವ್ಯವಹಾರ ಮತ್ತು ಸಂಚಿತ ನಿಧಿಯ ದುರುಪಯೋಗ ಹಾಗೂ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಸಿದ್ದರಾಮಯ್ಯ ಅವರಿಂದ ಸಂವಿಧಾನದ ಬಾಧ್ಯತೆಯ ಉಲ್ಲಂಘನೆ ಮತ್ತು ಅಸಾಂವಿಧಾನಿಕ ಹಣಕಾಸು ವ್ಯವಹಾರಕ್ಕಾಗಿ ಅವರನ್ನು ವಜಾಗೊಳಿಸುವ ಕುರಿತು ತನಿಖೆಯ ವರದಿಯನ್ನು ಇದೇ ಸಂದರ್ಭದಲ್ಲಿ ಅವರು ಮಾನ್ಯ ಗವರ್ನರ್ ಅವರಿಗೆ ನೀಡಿದರು.