ಬೆಂಗಳೂರು: ಕೇಂದ್ರ ಸಚಿವ ಎ.ನಾರಾಯಣಸ್ವಾಮಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದು, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.
ಈ ಹಿಂದೆಯೇ ಗೋವಿಂದ ಕಾರಜೋಳಗೆ ಚಿತ್ರದುರ್ಗದಿಂದ ಟಿಕೆಟ್ ನೀಡಲು ಹೈಕಮಾಂಡ್ ಉದ್ದೇಶಿಸಿತ್ತು. ಆದರೆ, ಸ್ಥಳೀಯರಲ್ಲದವರಿಗೆ ಟಿಕೆಟ್ ನೀಡುವುದಕ್ಕೆ ಚಿತ್ರದುರ್ಗ ಜಿಲ್ಲಾ ಬಿಜೆಪಿಯಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಟಿಕೆಟ್ ಘೋಷಣೆ ಮುಂದೂಡಲಾಗಿತ್ತು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಶ್ರೀ @GovindKarjol ಅವರಿಗೆ ಅಭಿನಂದನೆಗಳು.
— BJP Karnataka (@BJP4Karnataka) March 27, 2024
ವಿಜಯೀಭವ…#PhirEkBaarModiSarkar#ಮತ್ತೊಮ್ಮೆಮೋದಿಸರ್ಕಾರ pic.twitter.com/642n45eIbA
ರಾಜ್ಯದಲ್ಲಿ ಬಿಜೆಪಿ ಸ್ಪರ್ಧಿಸುತ್ತಿರುವ 25 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಟಿಕೆಟ್ಗಳನ್ನು ಈ ಹಿಂದೆಯೇ ಘೋಷಿಸಲಾಗಿತ್ತು.
ಇಂದು ಅಂತಿಮವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಗೋವಿಂದ ಕಾರಜೋಳಗೆ ಘೋಷಿಸಲಾಗಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಂದು ಬಾರಿ ಕಣಕ್ಕಿಳಿಯಲು ಉತ್ಸುಕವಾಗಿದ್ದ ಎ.ನಾರಾಯಣಸ್ವಾಮಿಗೆ ಅವಕಾಶ ಇಲ್ಲದಂತಾಗಿದೆ.