ಬೆಂಗಳೂರು:
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ನಗರದ ಅತ್ಯಂತ ಅವಶ್ಯಕ ಕಾಮಗಾರಿಯಾಗಿದ್ದು, ನಗರ ಸಂಚಾರ ದಟ್ಟಣೆ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಬಲ್ಲ BMRCL & ಕೆ – ರೈಡ್ ಗಳಿಗೆ ಪೂರ್ಣಾವಧಿ ಎಂ ಡಿ ಇರದೇ, ಸರ್ಕಾರವು 190 ಕಿಮೀ ಸುರಂಗ ರಸ್ತೆ ನಿರ್ಮಿಸಲು ಯೋಚಿಸುತ್ತಿರುವುದು ವಿಪರ್ಯಾಸ ಎಂದು ಬಿಜೆಪಿ ಸಂಸದ, ಬೆಂಗಳೂರು ದಕ್ಷಿಣ ಎಂಪಿ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ಟೀಕಿಸಿದರು.
ಸೂರ್ಯ X (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರ. “ಬೆಂಗಳೂರು ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆ ಯೆಡೆಗಿನ ದಿವ್ಯ ನಿರ್ಲಕ್ಷದ ಫಲವಾಗಿ ಕೆ – ರೈಡ್ ಗೆ ಪೂರ್ಣಾವಧಿ ಎಂ ಡಿ ನೇಮಕವಾಗದಿರುವುದು ರಾಜ್ಯ ಸರ್ಕಾರದ ನಿಷ್ಕ್ರಿಯತೆಗೆ ಸಾಕ್ಷಿ.”
ಬೆಂಗಳೂರು ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆ ಯೆಡೆಗಿನ ದಿವ್ಯ ನಿರ್ಲಕ್ಷದ ಫಲವಾಗಿ ಕೆ – ರೈಡ್ ಗೆ ಪೂರ್ಣಾವಧಿ ಎಂ ಡಿ ನೇಮಕವಾಗದಿರುವುದು ರಾಜ್ಯ ಸರ್ಕಾರದ ನಿಷ್ಕ್ರಿಯತೆಗೆ ಸಾಕ್ಷಿ.
— Tejasvi Surya (@Tejasvi_Surya) October 7, 2023
ಬೆಂಗಳೂರು ಸಬ್ ಅರ್ಬನ್ ರೈಲು ಅನುಷ್ಠಾನದ ಹೊಣೆ ಹೊತ್ತಿರುವ ಕೆ – ರೈಡ್ ಗೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರಿಲ್ಲದಿರುವುದು ವಿಪರ್ಯಾಸ.
ನನ್ನ ಮನವಿ… https://t.co/wUSM2j8Irh
“ಬೆಂಗಳೂರು ಸಬ್ ಅರ್ಬನ್ ರೈಲು ಅನುಷ್ಠಾನದ ಹೊಣೆ ಹೊತ್ತಿರುವ ಕೆ – ರೈಡ್ ಗೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರಿಲ್ಲದಿರುವುದು ವಿಪರ್ಯಾಸ.
“ನನ್ನ ಮನವಿ ಮೇರೆಗೆ ಕೇಂದ್ರ ರೈಲ್ವೆ ಸಚಿವರು ಪೂರ್ಣಾವಧಿ ಎಂ ಡಿ ನೇಮಕಕ್ಕೆ ಸ್ಪಂದಿಸಿದ್ದು, ಸೂಕ್ತ ನಿಯಮಾವಳಿ ರೂಪಿಸದೇ ಅಧಿಸೂಚನೆ ಹೊರಡಿಸುವುದು ಬೆಂಗಳೂರು ಅಭಿವೃದ್ಧಿಯ ಬಗೆಗಿನ ನಿರಾಸಕ್ತಿಯನ್ನು ಬಿಂಬಿಸುತ್ತದೆ.
“ಈ ಕುರಿತು ಆದ್ಯತೆ ಮೇರೆಗೆ ರೈಲ್ವೆ ಬೋರ್ಡ್ ನ ನಿಯಮಾವಳಿಗಳಿಗೆ ಅನುಗುಣವಾಗಿ ಪುನಃ ಅಧಿಸೂಚನೆ ಹೊರಡಿಸಿ ಶೀಘ್ರ ಎಂ ಡಿ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ನಾನು ಆಗ್ರಹಿಸುತ್ತೇನೆ.
“ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ನಗರದ ಅತ್ಯಂತ ಅವಶ್ಯಕ ಕಾಮಗಾರಿಯಾಗಿದ್ದು, ನಗರ ಸಂಚಾರ ದಟ್ಟಣೆ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಬಲ್ಲ BMRCL & ಕೆ – ರೈಡ್ ಗಳಿಗೆ ಪೂರ್ಣಾವಧಿ ಎಂ ಡಿ ಇರದೇ, ಸರ್ಕಾರವು 190 ಕಿಮೀ ಸುರಂಗ ರಸ್ತೆ ನಿರ್ಮಿಸಲು ಯೋಚಿಸುತ್ತಿರುವುದು ವಿಪರ್ಯಾಸ,” ಎಂದು ಅವರು ತಿಳಿಸಿದ್ದಾರೆ.